ದೇಶ/ವಿದೇಶರಾಜ್ಯಸುದ್ದಿ

ರೈಲಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಸಾವು

ಬೆಂಗಳೂರು: ವಂದೇ ಭಾರತ್​​​​​ ಹೈಸ್ಪೀಡ್​​​ ರೈಲಿಗೆ ಸಿಲು ಇಬ್ಬರು ನರ್ಸಿಂಗ್​​​​ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಡೆದಿದೆ.. ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ… 19 ವರ್ಷದ ಎಕಿಜ ಶಾಜಿ, 20 ವರ್ಷದ ಜಸ್ಟಿನ್​​​​​​​​​​​​​​​​ ಜೀಸೆಫ್​​​​ ಮೃತದುರ್ದೈವಿಗಳು.. ಇವರು ಕೇರಳ ಮೂಲದವರಾಗಿದ್ದು, ಸಪ್ತಗಿರಿ ಕಾಲೇಜಿನಲ್ಲಿ ಪ್ರಥಮ Bsc ನರ್ಸಿಂಗ್​​ ವ್ಯಾಸಂಗ ಮಾಡುತ್ತಿದ್ದರು..

ಇನ್ನು ಮೇಲ್ನೋಟಕ್ಕೆ ಇವರು ಆತ್ಮಹತ್ಯೆ ಮಾಡಿಕೊಂಡುವ ಶಂಕೆ ವ್ಯಕ್ತವಾಗಿದೆ… ಆದರೆ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಇಬ್ಬರು ಪಿಜಿಗೆ ಟ್ರ್ಯಾಕ್​​​ ಮೂಲಕ ಹೋಗುವ ವೇಳೆ ಸ್ಪೀಡಾಗಿ ಬಂದ ವಂದೇ ಭಾರತ್​​ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ..

ಈ ಸಂಬಂಧ UDR (ಅಸಹಜ ಸಾವಿನ ವರದಿ) ಅಡಿಯಲ್ಲಿ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಯುವಕ-ಯುವತಿ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಮೃತದೇಹಗಳನ್ನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Comments (0)

Your email address will not be published. Required fields are marked *

Back to top button