Friday, July 4, 2025
27.4 C
Bengaluru
Google search engine
LIVE
ಮನೆ#Exclusive NewsTop Newsಶಾಲಿನಿ ರಜನೀಶ್​ ವಿರುದ್ಧ ಆಕ್ಷೇಪಾರ್ಹ ಹೇಳಿಕೆ.. MLC ರವಿಕುಮಾರ್​ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕಿಡಿ..!

ಶಾಲಿನಿ ರಜನೀಶ್​ ವಿರುದ್ಧ ಆಕ್ಷೇಪಾರ್ಹ ಹೇಳಿಕೆ.. MLC ರವಿಕುಮಾರ್​ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕಿಡಿ..!

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​​ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್​ಸಿ ಎನ್​​. ರವಿ ಕುಮಾರ್​​ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರಿಂದ ಮಹಿಳೆಯರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಬಾಯಿ ತೆಗೆದ್ರೆ ಕೆಟ್ಟ ಮಾತುಗಳನ್ನು ರವಿಕುಮಾರ್​ ಹೇಳುತ್ತಿದ್ದಾರೆ.. ಮಾನ, ಮರ್ಯಾದೆ, ನಾಚಿಕೆ ಇಲ್ಲದ ವ್ಯಕ್ತಿ ರವಿಕುಮಾರ್​ ಎಂದು ಕಿಡಿಕಾರಿದ್ರು.. ಮಖ್ಯ ಕಾರ್ಯದರ್ಶಿ ಬಗ್ಗೆ ಸಲ್ಲದ ಮಾತನಾಡಿದ್ದು ಮಹಿಳಾ ಕುಲಕ್ಕೆ ಮಾಡಿದ ಅವಮಾನವಾಗಿದೆ. ಬಿಜೆಪಿ ಕುಟೀಲ ರಾಜಕೀಯದ ಮತ್ತೊಂದು ಮುಖವಾಡ ಕಳಚಿದೆ. ಈ ರೀತಿ ಮಾತಾಡುವವರಿಗೆ ಕಾನೂನು ತರುವ ವಿಚಾರ ಮಾಡ್ತೇವೆ ಎಂದು ಗುಡುಗಿದ್ರು.

ಕಳೆದ ಬಾರಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ಸಿ.ಟಿ ರವಿ ಅವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಆ ಪಕ್ಷದ ಯಾವ ಒಬ್ಬ ನಾಯಕರು ಮಾತನಾಡಲಿಲ್ಲ. ಇದು ಮಹಿಳೆಯರಿಗೆ ಬಿಜೆಪಿ ನಾಯಕರು ಎಂತಹ ಮರ್ಯಾದೆ ಕೊಡುತ್ತಾ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments