ನವದೆಹಲಿ: ದೆಹಲಿ ರೆಲ್ವೆ ನಿಲ್ದಾಣದಲ್ಲಿ ಒಂದು ವರ್ಷದ ಹಸುಗೂಸನ್ನು ಎದೆಗವಚಿಕೊಂಡ ಕರ್ತವ್ಯ ನಿರ್ವಹಿಸುತ್ತುರವ ಆರ್ ಪಿ ಎಫ್ ಕಾನ್ಸ್ಟೇಬಲ್ ಒಬ್ಬರ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ಪ್ರಯಾಗ್ ರಾಜ್ ನ ಮಹಾಕುಂಭಮೇಳಕ್ಕೆ ದೇಶದಾದ್ಯಂತ ಜನಸಾಗರ ಹರಿದು ಬರುತ್ತಿದೆ. ಈ ಹಿನ್ನಲೇ ದೆಹಲಿ ರೆಲ್ವೇ ನಿಲ್ದಾಣದಲ್ಲಿ ಜನದಟ್ಟಣೆಯಿಂದಾಗಿ ಇತ್ತಿಚಿಗೆ ಕಾಲ್ತುಳಿತ ಉಂಟಾಗಿ 18 ಜನ ಸಾವನ್ನಪ್ಪಿದ್ದರು.
ಅತೀ ಹೆಚ್ಚು ಜನದಟ್ಟಣೆಯಿಂದಾಗಿ ರೆಲ್ವೇ ನಿಲ್ದಾಣದಲ್ಲಿ ಹೆಚ್ಚಿನ ಪೋಲಿಸ್ ರನ್ನು ಭದ್ರತೆಗಾಗಿ ನೇಮಿಸಲಾಗಿದೆ. ರಾತ್ರಿ ಹೊತ್ತು ಒಂದು ವರ್ಷದ ಮಗುವನ್ನು ಎದೆಗವಚಿಕೊಂಡು ಗಸ್ತು ತಿರುಗುತ್ತಿರುವ ಮಹಿಳಾ ಕಾನ್ಸ್ಟೇಬಲ್ ಒಬ್ಬರ ವಿಡಿಯೋವನ್ನು ಆರ್ ಪಿ ಎಫ್ ಇಂಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಅದೀಗ ಭಾರಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
https://x.com/RPF_INDIA/status/1891545420133757311
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ಹೆರಿಗೆ ರಜೆಯಲ್ಲಿದ್ದವರನ್ನು ವಾಪಸ್ ಕರೆಸಿಕೊಳ್ಳಲಾಯಿತು. ರೀನಾ ಅವರ ಪತಿ, ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಆಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅತ್ತೆ, ಮಾವ ಬದುಕಿಲ್ಲ, ಮಗುವನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಅನಿವಾರ್ಯವಾಗಿ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಬೇಕಾಯಿತು. ಮಗುವನ್ನು ಆರೈಕೆ ಮಾಡಲು ಜನರ ಹುಡುಕಾಟದಲ್ಲಿದ್ದಾರೆ. ರೀನಾ ಕರ್ತವ್ಯದಲ್ಲಿರುವಾಗ ತನ್ನ ಮಗುವಿಗೆ ಮನೆಯಲ್ಲಿ ತಯಾರಿಸಿದ ಗಂಜಿ, ಕಂಬಳಿ, ಡೈಪರ್ ಮತ್ತು ಹಾಲು ಒಯ್ಯುತ್ತಾರೆ.