ಸಿನಿಮಾ

ರಂಗನಾಯಕ ಚಿತ್ರದ ಪಬ್ಲಿಸಿಟಿ ಗಿಮಿಕ್ ಗಾಗಿ ಹಲವರ ಹೆಸರು ಬಳಸಿಕೊಂಡಿದ್ದಾರೆ .

 ಬೆಂಗಳೂರು :  ರಂಗನಾಯಕ ಚಿತ್ರದ ಪಬ್ಲಿಸಿಟಿ ಗಿಮಿಕ್ ಗಾಗಿ ಹಲವರ ಹೆಸರು ಬಳಸಿಕೊಂಡಿದ್ದಾರೆ . ಬಿಗ್‌ಬಾಸ್ ಶ್ರುತಿ, ಮೀಟು ಶ್ರುತಿ ಎನ್ನುವ ಸಾಲುಗಳು ಕೆಲವರ ನಿದ್ದೆ ಕಲಕಿದೆ.  ಶಾರದಾಸುತ ಸಾಹಿತ್ಯ, ಅನೂಪ್ ಸಿಳೀನ್ ಮ್ಯೂಸಿಕ್ ಮಾಡಿ ಹಾಡಿದ್ದಾರೆ. ಇನ್ನು ಹಾಡಿನಲ್ಲಿ ಮೀಟು ಶ್ರುತಿ ಎನ್ನುವ ಪದ ಬಳಕೆಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ .

ನಿರ್ದೇಶಕ ಗುರುಪ್ರಸಾದ್ ಸ್ಪಷ್ಟನೆ ಮಾಡಿರುವ  ರಂಗನಾಯಕ ಕಥೆಯಲ್ಲಿ ಜಗ್ಗೇಶ್ ಕತ್ತೆ ಮೇಯಿಸುವವನ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಸನಿವೇಶದಲ್ಲಿ ಜಗ್ಗೇಶ್ ಹಾಡು ಹಾಡುವಾಗ ಕತ್ತೆಗಳು ಹಾಡುತ್ತವೆ. ಅದು ಶ್ರುತಿ ಬಿಟ್ಟು ಹಾಡುತ್ತಿದ್ದಾಗ ಸಂಗೀತ ಪ್ರಕಾರದ ಶ್ರುತಿ ಬಗ್ಗೆ ಹೇಳುವಂತಹದ್ದು ಎನ್ನಲಾಗುತ್ತದೆ.

“ಶ್ರುತಿ ಹರಿಹರನ್ ಮೂಲತಃ ಕನ್ನಡದವರೆ ಅಲ್ಲ. ನನಗೆ ಶ್ರುತಿ ಬಗ್ಗೆ ಕೋಪ ಇತ್ತು ಅದನ್ನು ತೀರಿಸಿಕೊಳ್ಳಲು ಒಂದು ಅವಕಾಶ ಬೇಕಿತ್ತು. ಮೀಟು ಶ್ರುತಿ ಅಂತ ಬೇಕು ಅಂತಲೇ ಹಾಡಿನಲ್ಲಿ ತಂದಿರೋದು” ಸ್ಪಷ್ಟನೆ ಕೊಟ್ಟ ಗುರು ಪ್ರಸಾದ್ ಗಂಡು ಹೆಣ್ಣು ಒಬ್ಬರಿಗೊಬ್ಬರು ಒಪ್ಪಿಕೊಂಡು ಅವರಿಬ್ಬರು ಏನಾದರೂ ವ್ಯವಸ್ಥೆ ಮಾಡಿಕೊಂಡರೆ ಮುಗೀತು. ಶೂಟಿಂಗ್ ಸಂದರ್ಭದಲ್ಲೆ ಹೇಳಿ ವಿಚಾರವನ್ನು ಇತ್ಯರ್ಥ ಮಾಡಿಕೊಳ್ಳಬಹುದಿತ್ತು.  ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ. ತಾನು ಪತೀವ್ರತೆ ಅಂತ ಪ್ರೂವ್ ಮಾಡಬೇಕಾಗಿತ್ತು.  “ಮೀಟು ಶ್ರುತಿ ಅಂತ ಸಾಂದರ್ಭಿಕವಾಗಿ ನಮ್ಮ ಸಿನಿಮಾ ಹಾಡಿನಲ್ಲಿ ತಂದಿದ್ದೇನೆ” ಎಂದು ಗುರುಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button