ಬೆಳಗಾವಿ: ಪೊಲೀಸರ ಎದುರಿನಲ್ಲಿಯೇ ಸಾರ್ವಜನಿಕವಾಗಿ ಗುಂಡು ಹಾರಿಸುವ ಮೂಲಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಗೋಕಾಕ್ನಲ್ಲಿ ನಡೆದ ಲಕ್ಷ್ಮೀದೇವಿ ಜಾತ್ರೆಗೆ ಬೆಂಬಲಿಗರೊಂದಿಗೆ ಆಗಮಿಸಿದ ಸಂತೋಷ್ ಜಾರಕಿಹೊಳಿ ಸಾರ್ವಜನಿಕವಾಗಿ ಬಂದೂಕು ಹಿಡಿದು ಗುಂಡು ಹಾರಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಎಲ್ಲೆಡೆ ಭಾರಿ ವೈರಲ್ ಆಗಿದೆ.
ಸಾವಿರಾರು ಜನರು ಸೇರಿರುವ ಇಂತಹ ಸಮಾರಂಭದಲ್ಲಿ ಸಂತೋಷ್ ಜಾರಕಿಹೊಳಿ ಗುಂಡು ಹಾರಿಸಿ ಸಂಭ್ರಮಿಸುವ ಮೂಲಕ ಮೊಂಡಾಟ ಮೆರೆದಿದ್ಧಾರೆ. ಈ ವೇಳೆ ಅಭಿಮಾನಿಗಳು ಸಂತೋಷ್ ಪರವಾಗಿ ಘೋಷಣೆ ಕೂಗಿದ್ದಾರೆ. ಘಟನೆ ಸಂಬಂಧ ಗೋಕಾಕ್ ಶಹರ ಠಾಣೆ ಪೊಲೀಸರು ಸಂತೋಷ್ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.