ಕೊಲ್ಲಂನಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದು ಬೃಹತ್ ಗುಂಡಿ ಸೃಷ್ಟಿ
ಕೊಲ್ಲಂ: ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕುಸಿದು, ಬೃಹತ್ ಗುಂಡಿ ಸೃಷ್ಟಿಯಾಗಿ ವಾಹನಗಳು ಸಿಲುಕಿಕೊಂಡ ಘಟನೆ ನಡೆದಿದೆ.. ಕೊಲ್ಲಂ ಚತ್ತನ್ನೂರ್ ಬಳಿಯ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಮಯದಲ್ಲಿ ಶಾಲಾ ವಾಹನವೊಂದು ಸರ್ವಿಸ್ ರಸ್ತೆಯಲ್ಲಿದ್ದು, ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ..
ಮಲಪ್ಪುರಂನ ಕುರಿಯಾಡಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಕುಸಿತದ ನಂತರ ಮೈಲಕ್ಕಾಡ್‌ನಲ್ಲಿ ಈ ಘಟನೆ ನಡೆದಿದೆ. ಇನ್ನು ಹೆದ್ದಾರಿ ಕುಸಿತದ ಬಗ್ಗೆ ಜಿಲ್ಲಾಧಿಕಾರಿ ಸಭೆ ಕರೆದಿದ್ದಾರೆ.. ರಾಜ್ಯ ಲೋಕೋಪಯೋಗಿ ಸಚಿವ ಮಹಮ್ಮದ್ ರಿಯಾಸ್ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ..


