ಮೈಸೂರು : ಛಡಿ ಕೊಟ್ಟು ಹೊಡೆಸಿಕೊಳ್ಳುವುದು ಇದೇ ನೋಡಿ. ಗಣಿಗಾರಿಕೆ ಸ್ಟಾಪ್ ಮಾಡಿದ್ದಕ್ಕೆ ಹೈ ಕೋರ್ಟ್ ಮೆಟ್ಟಿಲೇರಿದ ಗಣಿ ಮಾಲೀಕರಿಗೆ, ಕೋರ್ಟ್ ಸರಿಯಾಗಿಯೇ ಛಡಿ ಏಟು ನೀಡಿದೆ. ಕೆಆರ್ ಎಸ್ ಸುತ್ತಮುತ್ತಲ 20 ಕಿಮೀ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆಯನ್ನು ನಿಷೇಧ ಮಾಡಿದೆ. ನಿಷೇಧದ ಹಿಂದೆ ಓರ್ವ ಸಾಮಾಜಿಕ ಹೋರಾಟಗಾರ ಮತ್ತು ಸಂಸದರ ಹೋರಾಟವೂ ಇದೆ. ಬಿಜೆಪಿ ಒಮ್ಮೆ ಮಾತ್ರ ಪಾದಯಾತ್ರೆ ಮಾಡಿ ಹೋರಾಟದಿಂದ ಹಿಂದೆ ಸರಿದಿತ್ತು. ಹಾಗಾದರೆ ಗಣಿಗಾರಿಕೆ ನಿಷೇಧ ಮತ್ತು ಹೋರಾಟದ ಇತಿಹಾಸವನ್ನ ಕೆದಕಿ ನೋಡಿದ್ರೆ ಕಾಣೋದು ಸತ್ಯಗಳು.
2017ರಲ್ಲಿ ಕೇಳಿಸಿದ ಆ ಒಂದು ಸೌಂಡ್ ಕೆಆರ್ ಎಸ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಕ್ಕೆ ಕಾರಣವಾಯಿತು. ಸಾಮಾಜಿಕ ಹೋರಾಟಗಾರ ಕಲ್ಲಹಳ್ಳಿ ರವೀಂದ್ರ ಕೆಆರ್ ಎಸ್ ವ್ಯಾಪ್ತಿಯ ಬೇಬಿ ಬೆಟ್ಟದ ಅಮೃತ್ ಮಹಲ್ ಕಾವಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ, ಸ್ಫೋಟಕಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಶತಮಾನಗಳ ಇತಿಹಾಸ ಕಂಡಿರುವ ಕೆಆರ್ ಎಸ್ ಅಣೆಕಟ್ಟೆಗೆ ಅಪಾಯ ಒದಗಲಿದೆ ಎಂಬ ಹೋರಾಟ ಶುರು ಮಾಡಿದ್ದರು. ಹೋರಾಟದ ಫಲವಾಗಿ ಜಿಲ್ಲಾಡಳಿತ ಕೆಲವು ಸನ್ನಿವೇಶಗಳಲ್ಲಿ ಗಣಿಗಾರಿಕೆಯನ್ನೂ ನಿಷೇಧ ಮಾಡಿತ್ತು.
ಲೋಕಾಯುಕ್ತ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳಿಗೆ ರವೀಂದ್ರ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರಾಜ್ಯ ಸರ್ಕಾರ ತನಿಖೆಗೂ ಮುಂದಾಗಿತ್ತು. ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ಮಾಡುವ ಮೂಲಕ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಅಧ್ಯಯನ ನಡೆಸಿ ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧ ಮಾಡಿತ್ತು. ಈ ನಿಷೇಧವನ್ನ ಪ್ರಶ್ನಿಸಿ ಗಣಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್, ಸರ್ಕಾರ, ಜಿಲ್ಲಾಡಳಿತದ ವರದಿ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಆದರಿಸಿ ಅಣೆಕಟ್ಟೆಯ ಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧ ಮಾಡಿ ಆದೇಶವನ್ನು ಹೊರಡಿಸಿತ್ತು
ಸಂಸದೆ ಸುಮಲತಾ ಅಂಬರೀಶ್ ಅಣೆಕಟ್ಟೆ ಸುರಕ್ಷತೆ ಬಗ್ಗೆ ಸಂಸತ್ ನಲ್ಲಿ ಧ್ವನಿ ಎತ್ತಿದ್ದರು. ರಾಜ್ಯ ಸರ್ಕಾರದ ಮೇಲೆ ಒತ್ತಡವನ್ನು ಹಾಕುವ ಮೂಲಕ ರೈತರ ಜೀವನಾಡಿ ಕೆ ಆರ್ ಎಸ್ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಗಮನ ಸೆಳೆದಿದ್ದರು. ಆದರೂ ಗಣಿಮಾಲೀಕರು ಹೈಕೋರ್ಟ್ ಮೆಟ್ಟಿಲೇರಿ ಸರ್ಕಾರದ ನಿಷೇಧ ಕುರಿತು ಪ್ರಶ್ನೆ ಮಾಡಿದ್ದರು.
ಸದ್ಯ ಅಮಾಜಿಕ ಹೋರಾಟಗಾರ.ಣೆಕಟ್ಟೆ ರಕ್ಷಣೆಗಾಗಿ ಹೈಕೋರ್ಟ್ ಸೂಕ್ತ ಕ್ರಮವನ್ನು ಕೈಗೊಂಡಿದೆ. ಆದರೂ ಗಣಿಗಾರಿಕೆಯ ಕಳ್ಳಾಟ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ.