Thursday, December 11, 2025
23.9 C
Bengaluru
Google search engine
LIVE
ಮನೆರಾಜ್ಯಮಕ್ಕಳ ಭವಿಷ್ಯಕ್ಕಾಗಿ ಮತ್ತೆ ಒಂದಾದ ಲೀಲಾ, ಮಂಜು

ಮಕ್ಕಳ ಭವಿಷ್ಯಕ್ಕಾಗಿ ಮತ್ತೆ ಒಂದಾದ ಲೀಲಾ, ಮಂಜು

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡಿದ್ದ ಲೀಲಾ ಮತ್ತು ಮಂಜುನಾಥ್​​​​ ಕೊನೆಗೂ ಒಂದಾಗಿದ್ದಾರೆ.. ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಇಬ್ಬರು ದೂರ ಆಗಿದ್ದು, ಇದೀಗ ಮಕ್ಕಳ ಭವಿಷ್ಯಕ್ಕಾಗಿ ಪ್ರಿಯಕರ ಮನೆಯಲ್ಲಿದ್ದ ಲೀಲಾ ಪತಿ ಮಂಜುನಾಥ್​ ಜೊತೆ ಒಂದಾಗಿ ಮನೆಗೆ ಬಂದಿದ್ದಾರೆ.. ಧರ್ಮಸ್ಥಳದಲ್ಲಿ ಲೀಲಾಗೆ ತಅಳಿ ಕಟ್ಟಿ ಮತ್ತೆ ಹೊಸದಾಗಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಸಂತು, ಮಂಜು, ಲೀಲಾ ಟ್ರಯಾಂಗಲ್‌ ಲವ್‌ಸ್ಟೋರಿ ಸಂಚಲನ ಸೃಷ್ಟಿಸಿತ್ತು. ಯಾವ್ದೇ ಕಾರಣಕ್ಕೂ ನಿನ್ ಜೊತೆ ಬಾಳಲ್ಲ ಎಂದಿದ್ದ ಲೀಲಾ, ಕೊನೆಗೂ ಗಂಡ ಮಂಜುನ ಗೋಳಾಟಕ್ಕೆ ಕರಗಿ ಕೈ ಹಿಡಿದಿದ್ದಾರೆ. ಪ್ರಿಯಕರ ಸಂತು ಮೇಲೆ ಮಂಜು ಹಲ್ಲೆ ನಡೆಸಿ, ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದು ಹೊಸ ಆಟೋ ಖರೀದಿಸಿ ಬದುಕು ಶುರು ಮಾಡಿದ್ದ.

ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಮತ್ತೆ ಒಂದಾಗಿದ್ದು, ಮಂಜು ತನ್ನ ಕುಟುಂಬದವರನ್ನ ನೆನೆದು ಕಣ್ಣೀರು ಹಾಕಿದ್ರು. ಲೀಲಾ ಕೂಡ ನಾವಿಬ್ರು ಹಳೆಯದನ್ನ ಮೆರೆತು ಹೊಸ ಜೀವನ ಶುರು ಮಾಡ್ತಿವಿ ಎಂದು ಹೇಳಿದ್ರು. ಬನ್ನೇರುಘಟ್ಟದ ಬಾಡಿಗೆ ಮನೆಯಲ್ಲಿ ಈ ಜೋಡಿ ಖುಷಿಯ ಕ್ಷಣಗಳನ್ನ ಕಳೆಯುತ್ತಿದೆ. ಲೀಲಾ ಬಂಗಾರಿ ಬಂದ್ಬಿಡು ಅಂತ ಗೊಗೆರೆಯುತ್ತಿದ್ದ ಮಂಜುನ ಸಂಕಟಕ್ಕೆ ಕೊನೆಗೂ ಸಮಾಧಾನ ಸಿಕ್ಕಿದೆ. ಹಾದಿಬೀದಿ ರಂಪಾಟ ಆಗಿದ್ದ ಮಂಜು ಲೀಲಾ ಕುಟುಂಬ ವಿಚಾರ ಇದೀಗಾ ಸುಖಾಂತ್ಯ ಕಂಡಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments