ಚುನಾವಣೆ ಬಂದ್ರೆ ಸಾಕು ರಾಜಕೀಯ ಪಕ್ಷಗಳ ಹಣಕಾಸಿನ ಮೂಲಗಳು, ಕಪ್ಪು ಹಣದ ಚರ್ಚೆ ಶುರುವಾಗುತ್ತದೆ. ಪ್ರತಿ ಚುನಾವಣೆಗೂ ರಾಜಕೀಯ ಪಕ್ಷಗಳು ನೂರಾರು ಕೋಟಿಗಳನ್ನು ಖರ್ಚು ಮಾಡುತ್ತವೆ. ಇದರಿಂದಾಗಿ ಚುನಾವಣಾ ಅಕ್ರಮಗಳು ನಡೆಯುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತವೆ. ಆದ್ರೆ, ರಾಜಕೀಯ ಪಕ್ಷಗಳು ಮಾತ್ರ ಇದನ್ನು ಅಲ್ಲಗಳೆಯುತ್ತಿವೆ. ಇದೀಗ ಎನ್.ಜಿ.ಓ ವೊಂದು ನಡೆಸಿದ ಸಮೀಕ್ಷೆ ಪ್ರಕಾರ , ರಾಜಕೀಯ ಪಕ್ಷಗಳು ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂದು ತೋರಿಸಿ, ಭಾರಿ ಅಕ್ರಮ ನಡೆಸುತ್ತಿರುವುದು ಬಯಲಾಗಿದೆ.
ಈ ಸಮೀಕ್ಷೆಯಲ್ಲಿ ಮುಖ್ಯವಾಗಿ ಕಾಂಗ್ರೆಸ್, ಬಿಜೆಪಿ, ಆಪ್ , ಸಿಪಿಐ(ಎಂ), ಬಿಎಸ್.ಪಿ, ಎನ್.ಪಿ.ಇ.ಪಿ ಪಕ್ಷಗಳನ್ನು ಪರಿಗಣಿಸಲಾಗಿದೆ. ಅವುಗಳು ಧನ ಸಂಗ್ರಹಿಸುವ ಮೂಲಗಳ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಈ ಎಲ್ಲ ರಾಜಕೀಯ ಪಕ್ಷಗಳ ಧನ ಸಂಗ್ರಹ ಮುಖ್ಯವಾಗಿ ಮೂರು ಮೂಲಗಳಿಂದ ದೊರೆಯುತ್ತಿದೆ. ಇದರಲ್ಲಿ ಮುಖ್ಯವಾಗಿ ಶೇಕಡಾ 59.57 ಪ್ರತಿಶತಃ ಅಪರಿಚಿತ ದೇಣಿಗೆಯಿಂದ 1832.8788 ಕೋಟಿ ರೂ.ಗಳಷ್ಟು ಸಂಗ್ರಹವಾಗುತ್ತಿದೆ. ಇದು ಬಹಳ ದೊಡ್ಡ ಪ್ರಮಾಣದಲ್ಲಿದೆ. ಇದು 20ಸಾವಿರ ರೂಪಾಯಿಗಳಿಗಿಂತ ಕಡಿಮೆ ದೇಣಿಗೆಯಾಗಿದೆ. ಆದರೆ, 20ಸಾವಿರ ರೂ.ಗಳಿಗಿಂತೆ ಕಡಿಮೆ ದೇಣಿಗೆ ನೀಡಿದವರ ವಿವರವನ್ನು, ಲೆಕ್ಕವನ್ನು ಕೊಡುವಂತಿಲ್ಲ. ಚುನಾವಣಾ ಆಯೋಗಕ್ಕೆ ನೀಡುವಂತಿಲ್ಲ. ಹೀಗಾಗಿ, ರಾಜಕೀಯ ಪಕ್ಷಗಳು ಬಹಳಷ್ಟು ದೇಣಿಗೆಯನ್ನು ಇದೇ ರೀತಿ ಸಂಗ್ರಹಿಸಿರುವುದಾಗಿ ಹೇಳಿಕೊಳ್ಳುತ್ತಿವೆ.
ಇನ್ನುಳಿದಂತೆ ಪರಿಚಿತ ಮೂಲಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸುತ್ತವೆ. ಇದರಲ್ಲಿ ಮುಖ್ಯವಾಗಿ 20ಸಾವಿರ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆಯನ್ನು ಸಂಗ್ರಹಿಸುವುದರ ಬಗ್ಗೆ ಕಡ್ಡಾಯವಾಗಿ ದೇಣಿಗೆ ನೀಡಿದವರ ವಿವರ ನೀಡುಬೇಕು ಎಂದು ಇದೆ. ರಾಜಕೀಯ ಪಕ್ಷಗಳು ಈ ರೀತಿಯ ದೇಣಿಗೆ ನೀಡಿದವರ ವಿವರ ನೀಡುತ್ತವೆ. ಆದರೆ ಇದು 27.64 ಪ್ರತಿಶತಃ ಮಾತ್ರ ಇದೆ. ಇದರ ಮೊತ್ತ 850.438 ಕೋಟಿಗಳಷ್ಟಾಗುತ್ತಿದೆ. ರಾಜಕೀಯ ಪಕ್ಷಗಳು ಈ ಧನ ಸಂಗ್ರಹದ ಲೆಕ್ಕ ಕೊಡುತ್ತವೆಯಾದರೂ ಅದು ಅಂತಹ ಗಣನೀಯ ಪ್ರಮಾಣದಲ್ಲಿ ಇಲ್ಲ. ಹೀಗಾಗಿ, ಚುನಾವಣಾ ಆಯೋಗ ಹಾಗೂ ಆದಾಯ ಇಲಾಖೆಗೆ ಕಡ್ಡಾಯವಾಗಿ ಲೆಕ್ಕಪತ್ರ ಸಲ್ಲಿಸುವದನ್ನು ಕಡ್ಡಾಯ ಮಾಡಿದ್ದರೂ ಯಾವುದೇ ಉಪಯೋಗವಾಗುತ್ತಿಲ್ಲ.
ಇದೇ ರೀತಿಯಾಗಿ ರಾಜಕೀಯ ಪಕ್ಷಗಳು ಇತರೆ ಪರಿಚಿತ ಮೂಲಗಳಿಂದ ಹಣ ಸಂಗ್ರಹಿಸುತ್ತವೆ. ಇದು ಸಹ ಗಣನೀಯ ಪ್ರಮಾಣದಲ್ಲಿ ಇಲ್ಲ. ಶೇ 12.79ರಷ್ಟು ದೇಣಿಗೆಯನ್ನು ಮಾತ್ರ ಇತರೆ ಪರಿಚಿತ ಮೂಲಗಳಾದ ಚರ ಸ್ಥಿರ ಆಸ್ತಿ ಮಾರಾಟದಿಂದ ಬಂದ ಹಣ, ಪ್ರತಿನಿಧಿ ಶುಲ್ಕ, ಬ್ಯಾಂಕ್ ಬಡ್ಡಿ, ಪಬ್ಲಿಕೇಷನ್ಗಳ ಮಾರಾಟದ ಮೂಲಗಳಿಂದ ಹಣ ಸಂಗ್ರಹಿಸುವುದು ಮಾಡುತ್ತಿವೆ. ಇದು ಕೇವಲ 12.79ರಷ್ಟು ಅಂದರೆ, 393.5652ರಷ್ಟಾಗಿದೆ.
ಇತ್ತೀಚಿಗೆ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಬಾಂಡ್ಗಳ ಮೂಲಕ ಹಣ ಸಂಗ್ರಹಿಸುವುದನ್ನು ನಿಷೇಧಿಸಿದೆ. ಅಲ್ಲದೇ ಆರ್.ಟಿ.ಐ. ಅಡಿ ರಾಜಕೀಯ ಪಕ್ಷಗಳ ಮಾಹಿತಿ ನೀಡಬೇಕೆಂಬುದನ್ನು ತಿಳಿಸಲಾಗಿದೆ. ಆದರೆ, ಕಡ್ಡಾಯಗೊಳಿಸಲಾಗಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ಸಾಕಷ್ಟು ಅಕ್ರಮ ಮಾಡಲು ದಾರಿ ಮಾಡಿಕೊಟ್ಟಂತಾಗಿದೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಮಹತ್ವದ ಪಾತ್ರ ವಹಿಸುತ್ತಿವೆ. ಆದರೆ, ಇವುಗಳು ಪ್ರಾಮಾಣಿಕವಾಗಿ ನಡೆದುಕೊಳ್ಳುವಂತಾದಲ್ಲಿ ಮಾತ್ರ, ಉತ್ತಮ ಆಡಳಿತ ನೀಡಲು ಸಾಧ್ಯ. ಅಲ್ಲದೇ ರಾಹಕೀಯ ಪಕ್ಷಗಳ ಹಣಕಾಸು ವ್ಯವಹಾರದ ದಾಖಲೆಗಳು ವಾರ್ಷಿಕವಾಗಿ ಸಿಎಜಿ ಹಾಗೂ ಭಾರತೀಐ ಚುನಾವಣಾ ಆಯೋಗದಿಂದ ವಿಮರ್ಶೆಗೆ ಒಳಪಡಬೇಕು. ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ವಾಗಿ ನಡೆದುಕೊಳ್ಳುವಂತೆ ಮಾಡಬೇಕಿದೆ. ಹೀಗಾಗಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಕಡ್ಡಾಯವಾಗಿ ಮತದಾರರಿಗೆ ನೀಡಬೇಕೆಂಬುದನ್ನು , ಮಾಹಿತಿ ಹಕ್ಕು ಕಾಯಿದೆಯಡಿ ಎಲ್ಲ ರೀತಿಯ ಮಾಹಿತಿಯನ್ನು ನೀಡಬೇಕೆಂಬುದನ್ನು ಕಡ್ಡಾಯಗೊಳಿಸಬೇಕು. ಅಂದಾಗ ಮಾತ್ರ, ಪ್ರಜಾಪ್ರಭುತ್ವನ್ನು, ಚುನಾವಣಗಳನ್ನು ಹಾಗೂ ರಾಜಕೀಯ ಪಕ್ಷಗಳನ್ನು ಸುಭದ್ರಗೊಳಿಸಲು ಸಾಧ್ಯವಿದೆ.