ದೆಹಲಿ: ಮುಡಾ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಸಿದ್ದರಾಮಯ್ಯರಿಗೆ ಬಿಗ್ ರಿಲೀಫ್ ಸಿಕ್ಕಿದೆ. ED ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಸಿಎಂ ಪತ್ನಿ ವಿರುದ್ಧದ ಮುಡಾ ಕೇಸ್ ಅರ್ಜಿ ವಜಾಗೊಂಡಿದೆ.
ED ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಹಾಗೂ ಕೆ. ವಿನೋದ್ ಚಂದನ್ ನೇತೃತ್ವದ ಪೀಠ ED ವಿರುದ್ಧ ಕಿಡಿಕಾರಿದೆ. ನ್ಯಾಯಾಲಯದ ಹೊರಗೆ ಮತದಾರರ ಮಧ್ಯೆ ರಾಜಕೀಯ ಹೋರಾಟಗಳು ನಡೆಯಲಿ.. ಇದರಲ್ಲಿ ED ಯಾಕೆ ಬಳಕೆಯಾಗುತ್ತಿದೆ ಎಂದು ಪ್ರಶ್ನಿಸಿದರು.
ದುರದೃಷ್ಟ ಎಂದರೆ ನನಗೆ ಮಹಾರಾಷ್ಟ್ರದಲ್ಲಿ ಕೆಲವು ಅನುಭವ ಆಗಿದೆ. ನಾವು ಬಾಯ್ಬಿಟ್ಟು ಮಾತಾಡುವಂತೆ ಮಾಡ್ಬೇಡಿ, ಇಲ್ಲವಾದ್ರೆ ಇಡಿ ಬಗ್ಗೆ ನಾವು ಕೆಲವು ಕಠಿಣ ಟಿಪ್ಪಣಿಗಳನ್ನು ಮಾಡ್ಬೇಕಾಗುತ್ತದೆ. ಈ ಹಿಂಸೆಯನ್ನು ನೀವು ಈಗ ದೇಶಾದ್ಯಂತ ಮುಂದುವರೆಸಲು ಸಾಧ್ಯವಿಲ್ಲ ಎಂದು ED ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‍ಗೆ ED ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ್ದು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧವೂ ಹೂಡಲಾದ ಹಣ ವರ್ಗಾವಣೆ ಪ್ರಕರಣವನ್ನು ನ್ಯಾಯಾಲಯ ರದ್ದು ಪಡಿಸಿದೆ.


