ನವೆಂಬರ್‌ 26 ರಂದು ಭಾರತ ಸಂವಿಧಾನವನ್ನು ಅಂಗೀಕರಿಸಲಾಯಿತು ಎನ್ನಲಾಗುತ್ತದೆ. 1949ರ ನವೆಂಬರ್‌ 26 ರಂದು ಭಾರತೀಯ ಸಂವಿಧಾನವನ್ನು ಸಂವಿಧಾನ ಸಭೆಯ ಅಂಗೀಕರಿಸಿತು. ಭಾರತ ಸಂವಿಧಾನ 1956ರ ಜನವರಿ 26 ರಂದು ಜಾರಿಗೆ ಬಂದಿತ್ತು. ಇನ್ನು ಇದಕ್ಕೆ ಮಹತ್ವ ಬಂದಿದ್ದು ಪ್ರಧಾನಿ ಮೋದಿ ನವೆಂಬರ್‌ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿದರು.

ಸಂವಿಧಾನ ದಿನವನ್ನು ಸಂವಿಧಾನ್‌ ದಿವಸ್‌ ಎಂದೂ ಕರೆಯಲಾಗುತ್ತದೆ. ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ, ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಿತು. ಡಾ. ಬಿ. ಆರ್‌. ಅಂಬೇಡ್ಕರ್‌ ಅವರನ್ನು ಸಂವಿಧಾನ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಡಾ. ರಾಜೇಂದ್ರ ಪ್ರಸಾದ್‌ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು.

1948ರ ಆರಂಭದಲ್ಲಿ ಡಾ. ಅಂಬೇಡ್ಕರ್‌ ಭಾರತೀಯ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು ಹಾಗೂ ಅದನ್ನು ಸಂವಿಧಾನ ಸಭೆಯಲ್ಲಿ ಮಂಡಿಸಿದರು. ನವೆಂಬರ್‌ 26, 1946ರಂದು ಈ ಕರಡನ್ನು ಕೆಲವು ತಿದ್ದುಪಡಿಗಳೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ 1950ರ ಜನವರಿ 26 ರಂದು ಭಾರತೀಯ ಸಂವಿಧಾನವು ಗಣರಾಜ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಯ್ತು.

ಸ್ವತಂತ್ರ ಭಾರತಕ್ಕಾಗಿ ಸಂವಿಧಾನವನ್ನು ರಚಿಸುವ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಲು ಸಂವಿಧಾನ ಸಭೆಯು ಸುಮಾರು ಮೂರು ವರ್ಷಗಳ ಸಮಯ ತೆಗೆದುಕೊಂಡಿತು. ಭಾರತೀಯ ಸಂವಿಧಾನವು ಅಂಗ್ಲ ಭಾಷೆಯಲ್ಲಿ 1,17,360 ಪದಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ.

ಭಾರತ ಸಂವಿಧಾನ ದಿನವು ಅಪಾರ ಐತಿಹಾಸಿಕ ಹಾಗೂ ಸಾಂಕೇತಿಕ ಮಹತ್ವವನ್ನು ಹೊಂದಿದೆ. ಇದು ಭಾರತೀಯ ಸಂವಿಧಾನ ಅಂಗೀಕಾರವನ್ನು ಗುರುತಿಸುತ್ತದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶ ಇತಿಹಾಸದಲ್ಲಿ ಘಟಿಸಿದ ಮಹತ್ವದ ಹಾಗೂ ಅದ್ಭುತ ಕ್ಷಣವಾಗಿದೆ. ಡಾ. ಬಿ.ಆರ್‌.ಅಂಬೇಡ್ಕರ್‌ ಅವರಂತಹ ಮಹಾನ್‌ ವ್ಯಕ್ತಿಗಳ ನೇತೃತ್ವದ ಸಂವಿಧಾನ ರಚನಾ ಸಭೆಯ ಸದಸ್ಯರ ಅವಿರತ ಪ್ರಯತ್ನಗಳನ್ನು ಈ ರಾಷ್ಟ್ರೀಯ ಐಕ್ಯತಾ ಸಮಾವೇಶದ ಮೂಲಕ ಗೌರವಿಸಲಾಗುತ್ತದೆ.

By admin

Leave a Reply

Your email address will not be published. Required fields are marked *

Verified by MonsterInsights