ಜಿಲ್ಲೆ

ಚಿಂಚೋಳಿ ತಾಲೂಕಿನಾದ್ಯಂತ ಧಾರಾಕಾರ ಮಳೆ; ಅವಾಂತರ

ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ವರುಣ ಆರ್ಭಟ ಜೋರಾಗಿದೆ. ಕಳೆದ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಚಿಂಚೋಳಿ ತಾಲೂಕಿನ ಹಲವಡೆ ಜಲಾವೃತವಾಗಿದೆ.

ಭಾರಿ ಮಳೆಯಿಂದ ಬೂತಪುರ ಬಳಿ ಸೇತುವೆ ತುಂಬಿ ಹರಿಯುತ್ತಿದ್ದು, ಬೂತಪುರ , ರುದ್ನೂರ, ರಾಯಕೋಡ, ಚಿಂತಪಳ್ಳಿ, ಬೆನಕೇಪಲ್ಲಿ ರಸ್ತೆ ಸಂಚಾರ  ಸ್ಥಗಿತಗೊಂಡಿದೆ. ಇದರಿಂದ ವಿದ್ಯಾರ್ಥಿಗಳು, ವಾಹನ ಸವಾರರು ಪರವಾಡುವಂತಾಗಿದೆ.

ಚಿಂಚೋಳಿ ತಾಲೂಕಿನ ರತ್ನೂರು ಗ್ರಾಮದಲ್ಲಿ ಅಧಿಕ ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಳೆಯಿಂದ ಹಲವು ಕಡೆಯ ರಸ್ತೆಗಳು ಜಲಾವೃತಗೊಂಡಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ.

ಚಿಂಚೋಳಿ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ರುದ್ನೂರು ಗ್ರಾಮದ ಪ್ರಸಿದ್ಧ ತೋಂಟದಾರೆ ಸಿದ್ಧೇಶ್ವರ ದೇವಸ್ಥಾನ ಬಳಿಯ ನಾಲೆ ತುಂಬಿ ಹರಿಯುತ್ತಿದ್ದು, ನಾಲೆಯ ನೀರು ದೇವಸ್ಥಾನದ ಪ್ರಾಂಗಣಕ್ಕೂ ನೀರು ನುಗ್ಗಿದ್ದು ಸಂಪೂರ್ಣ ಜಲಾವೃತವಾಗಿದೆ.

Comments (0)

Your email address will not be published. Required fields are marked *

Back to top button