Tuesday, February 24, 2026
24.5 C
Bengaluru
Google search engine
LIVE
ಮನೆಸಿನಿಮಾ"ಹಯಗ್ರೀವ" - ಫೆಬ್ರವರಿ 27ಕ್ಕೆ ಅಬ್ಬರಿಸಲಿದ್ದಾನೆ 'ಕರುನಾಡ ಶೋಕ್ದಾರ್'

“ಹಯಗ್ರೀವ” – ಫೆಬ್ರವರಿ 27ಕ್ಕೆ ಅಬ್ಬರಿಸಲಿದ್ದಾನೆ ‘ಕರುನಾಡ ಶೋಕ್ದಾರ್’

ಬಜಾರ್ ಸಿನಿಮಾ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದ ಧನ್ವೀರ್, ಈಗ ‘ಹಯಗ್ರೀವ’ನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ ,. ‘ಸಲಗ’ ಖ್ಯಾತಿಯ ಬೆಡಗಿ ಸಂಜನಾ ಆನಂದ್ ನಾಯಕಿಯಾಗಿ ಧನ್ವೀರ್‌ಗೆ ಸಾಥ್ ನೀಡಿದ್ದಾರೆ. ಹಿರಿಯ ನಟಿ ಆಶಾರಾಣಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಮತ್ತಷ್ಟು ತೂಕ ತಂದಿದ್ದಾರೆ. ನಟ ಧನ್ವೀರ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು , ಒಂದು ಪಾತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಆಗಿ ಅಬ್ಬರಿಸಿದ್ದರೆ, ಮತ್ತೊಂದು ಪಾತ್ರವು ಅತ್ಯಂತ ನಿಗೂಢವಾದ ಸಸ್ಪೆನ್ಸ್ ಹಿನ್ನೆಲೆಯನ್ನು ಹೊಂದಿದೆ. ನಾಯಕನ ಈ ಎರಡು ಶೇಡ್‌ಗಳು ಸಿನಿಮಾದ ವೇಗವನ್ನು ಹೆಚ್ಚಿಸಲಿವೆ.

ನಿರ್ದೇಶಕ ರಘುಕುಮಾರ್ ಆರ್.ಒ. ಚಿತ್ರದ ಕಥೆಯ ಬಗ್ಗೆ ಮಾತನಾಡುತ್ತಾ ಸಸ್ಪೆನ್ಸ್ ಬಿಟ್ಟುಕೊಟ್ಟಿದ್ದಾರೆ, ಈ ಸಿನಿಮಾ ಕೇವಲ ಇಂಡಿಯನ್ ಮೈಥಾಲಜಿ ಬಗ್ಗೆ ಮಾತ್ರವಲ್ಲ, ಆಧುನಿಕ ಸಮಾಜವನ್ನು ಕಾಡುತ್ತಿರುವ ಭಯಾನಕ ಮೆಡಿಕಲ್ ಮಾಫಿಯಾವನ್ನು ಈ ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಮನುಷ್ಯ ಸತ್ತ ಮೇಲೆ ನಡೆಯೋ ಪೋಸ್ಟ್‌ಮಾರ್ಟಂ ಪ್ರಕ್ರಿಯೆಯಲ್ಲಿ ಏನೆಲ್ಲಾ ಅಕ್ರಮಗಳು ನಡೆಯುತ್ತೆ ಅನ್ನೋದನ್ನ ತೋರಿಸುವ ಜೊತೆ ತಿದ್ದುಪಡಿ ಮತ್ತು ವೈದ್ಯಕೀಯ ಲೋಕದ ಒಳಗಿನ ಕರಾಳ ದಂಧೆಗಳ ಬಗ್ಗೆ ಸಂಶೋಧನಾತ್ಮಕವಾಗಿ ಕಥೆಯನ್ನು ಹೆಣೆಯಲಾಗಿದೆ.ವೈದ್ಯಕೀಯ ಲೋಕದ ಭೀಕರ ಸತ್ಯಗಳನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಡಲು ಚಿತ್ರತಂಡ ಸಜ್ಜಾಗಿದೆ ಎಂದಿದ್ದಾರೆ.

ನಿರ್ಮಾಪಕ ಮತ್ತು ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕನಸಿನ ಪ್ರಾಜೆಕ್ಟ್ ಇದಾಗಿದ್ದು, ಸಮಾಜಕ್ಕೆ ಒಂದು ಗಟ್ಟಿ ಸಂದೇಶ ನೀಡುವ ಉದ್ದೇಶದಿಂದ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದೇವೆ . ಒಬ್ಬ ಜನಪ್ರತಿನಿಧಿಯಾಗಿ ಸಮಾಜದಲ್ಲಿ ನಡೆಯುವ ದಂಧೆಗಳನ್ನು ಸಿನಿಮಾ ಮೂಲಕ ಜನರಿಗೆ ತಲುಪಿಸುವುದು ನಮಗೆ ಖುಷಿ ಕೊಟ್ಟಿದೆ. ಚಿತ್ರದ ಮೇಕಿಂಗ್‌ನಲ್ಲಿ ಎಲ್ಲೂ ರಾಜಿ ಮಾಡಿಕೊಂಡಿಲ್ಲ ಎಂದು ಭರವಸೆ ನೀಡಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡಿರುವ ನಾಯಕ ಧನ್ವೀರ್, ಈ ಚಿತ್ರದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿರೋದು ಒಂದು ಹೊಸ ಅನುಭವ ತಾವು ಕೇವಲ ಒಬ್ಬ ನಾಯಕನಾಗಿ ಅಷ್ಟೇ ಅಲ್ಲ, ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು ಅಂದ್ರೆ ಒಂದು ಪಾತ್ರದಲ್ಲಿ ಸಮಾಜದ ರಕ್ಷಣೆ ಮಾಡುವ ಖಡಕ್ ಪೊಲೀಸ್ ಆಫೀಸರ್ ಆಗಿ ಮತ್ತೊಂದು ಪಾತ್ರ ಪೂರ್ತಿ ಸಸ್ಪೆನ್ಸ್ ಇಂದ ಕೂಡಿದೆ ಎಂದು ಕುತೂಹಲ ಹುಟ್ಟಿಸಿದ್ದಾರೆ.

ನಾಯಕಿ ಸಂಜನಾ ಆನಂದ್ ಈ ಬಾರಿ ಕೇವಲ ಗ್ಲಾಮರಸ್ ಆಗಿ ಅಷ್ಟೇ ಅಲ್ಲದೆ, ತುಂಬಾನೇ ಇಂಟೆನ್ಸ್ ಮತ್ತು ಎಮೋಷನಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ‘ಸಲಗ’ ಸಿನಿಮಾದ ನಂತರ ತಮಗೆ ಸಿಕ್ಕಂತಹ ಒಂದು ಪವರ್‌ಫುಲ್ ಕಥೆ ಇದಾಗಿದ್ದು ಮೆಡಿಕಲ್ ಮಾಫಿಯಾದಂತಹ ಸಬ್ಜೆಕ್ಟ್ ಇರೋದ್ರಿಂದ ಸಿನಿಮಾ ತುಂಬಾ ಕುತೂಹಲಕಾರಿಯಾಗಿ ಮೂಡಿಬಂದಿದೆ ಧನ್ವೀರ್ ಅವರ ದ್ವಿಪಾತ್ರದ ಮ್ಯಾಜಿಕ್ ನೋಡಲು ತಾವು ಕೂಡ ಕಾಯ್ತಾ ಇರೋದಾಗಿ ತಿಳಿಸಿದ್ದಾರೆ .

ಚಿತ್ರದ ತಾಂತ್ರಿಕ ತಂಡವು ಅತ್ಯಂತ ಸಬಲವಾಗಿದ್ದು, ಜೂಡಾ ಸ್ಯಾಂಡಿ ಅವರ ಸಂಗೀತ ಸಿನಿಮಾದ ಮೂಡ್‌ಗೆ ತಕ್ಕಂತೆ ಮೂಡಿಬಂದಿದೆ. ಛಾಯಾಗ್ರಾಹಕ ಗಿರೀಶ್ ಅವರ ಕ್ಯಾಮೆರಾ ಕೈಚಳಕದಲ್ಲಿ ಚಿತ್ರದ ಪ್ರತಿ ಫ್ರೇಮ್ ಅದ್ಭುತವಾಗಿ ಮೂಡಿಬಂದಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಪೂರಕವಾದ ದೃಶ್ಯವೈಭವವನ್ನು ನೀಡಿದ್ದಾರೆ. ಇನ್ನು ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಎಕ್ಸಿಕ್ಯೂಟಿವ್ ಇನ್-ಚಾರ್ಜ್ ಆಗಿ ಮಹೇಶ್ ಗೌಡ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಸ್ಪೆನ್ಸ್, ಮೈಥಾಲಜಿ ಮತ್ತು ಮೆಡಿಕಲ್ ಮಾಫಿಯಾ ಈ ಮೂರರ ಮಿಶ್ರಣವೇ ‘ಹಯಗ್ರೀವ’,ಒಟ್ಟಾರೆ ಬೆಳ್ಳಿಪರದೆಯ ಮೇಲೆ ಈ ‘ಆಕ್ಷನ್ ಪ್ಯಾಕ್ಡ್’ ಹಂಗಾಮ ಶುರುವಾಗಲಿದೆ , ಫೆಬ್ರವರಿ 27ಕ್ಕೆ ‘ಹಯಗ್ರೀವ’ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆಯುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments