Sunday, December 7, 2025
17.6 C
Bengaluru
Google search engine
LIVE
ಮನೆದೇಶ/ವಿದೇಶಕೇರಳದ ಮಾಜಿ ಸಿಎಂ ವಿ.ಎಸ್​ ಅಚ್ಯುತಾನಂದ್ ಇನ್ನಿಲ್ಲ

ಕೇರಳದ ಮಾಜಿ ಸಿಎಂ ವಿ.ಎಸ್​ ಅಚ್ಯುತಾನಂದ್ ಇನ್ನಿಲ್ಲ

ಕೇರಳ: ಹಿರಿಯ ಕಮುನಿಸ್ಟ್ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್​ ಅಚ್ಯುತಾನಂದ್​ ಅವರು ಸೋಮವಾರ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು. ಜೂನ್​ 23 ರಂದು ಹೃದಯಾಘಾತದಿಂದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರು ಸುಮಾರು ಐದು ವರ್ಷಗಳ ಕಾಲ ಸಕ್ರಿಯ ರಾಜಕೀಯದಿಂದ ದೂರವಿದ್ದರು. ಅವರ ಮೃತದೇಹವನ್ನು ಎಕೆಜಿ ಸೆಂಟರ್​ಗೆ ಕೊಂಡೊಯ್ಯಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಮೃತದೇಹವನ್ನು ತಿರುವನಂತಪುರಂನಲ್ಲಿರುವ ಅವರ ನಿವಾಸಕ್ಕೆ ಕರೆತರಲಿದ್ದಾರೆ.

ಅವರ ಪಾರ್ಥಿವ ಶರೀರವನ್ನು ನಾಳೆ ಸೆಕ್ರೆಟರಿಯೇಟ್ ದರ್ಬಾರ್ ಹಾಲ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಅಲಪ್ಪುಳಕ್ಕೆ ತೆಗೆದುಕೊಂಡು ಹೋಗಲಿದ್ದು,  ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.

ಅಕ್ಟೋಬರ್​ 20 1923 ರಂದು ಶಂಕರನ್​ ಮತ್ತು ಅಕ್ಕಮ್ಮ ದಂಪತಿಯ ಮಗನಾಗಿ ಜನಿಸುತ್ತಾರೆ. ಅವರಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ ಅವರ ತಾಯಿ ಮೃತರಾಗುತ್ತಾರೆ. ಆರಂಭದಲ್ಲಿ, ಅವರು ತಮ್ಮ ಸಹೋದರನಿಗೆ ಟೈಲರಿಂಗ್ ಅಂಗಡಿಯಲ್ಲಿ ಸಹಾಯ ಮಾಡಿದರು. ಪಿ. ಕೃಷ್ಣ ಪಿಳ್ಳೈ ಸಹಾಯದಿಂದ ರಾಜಕೀಯ ಚಳುವಳಿಗೆ ಧುಮುಕಿದರು. 1938 ರಲ್ಲಿ ಕುಟ್ಟನಾಡಿನಲ್ಲಿ ಕೃಷಿ ಕಾರ್ಮಿಕರನ್ನು ಸಂಘಟಿಸುವ ಮೂಲಕ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿ ತಮ್ಮ ಆರಂಭಿಕ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.

1940 ರಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು ಮತ್ತು ನಂತರ 1957 ರಲ್ಲಿ ಅವಿಭಜಿತ CPI ರಾಜ್ಯ ಕಾರ್ಯದರ್ಶಿಯ ಭಾಗವಾಗಿದ್ದರು. ಅಚ್ಯುತಾನಂದ್ ಅವರು  ದೇಶದ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದರು ಮತ್ತು ಹಲವು ಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿದರು.

1985 ರಿಂದ ಸುಮಾರು ಮೂರು ದಶಕಗಳ ಕಾಲ ಪಾಲಿಟ್‌ಬ್ಯೂರೋ ಸದಸ್ಯರಾಗಿದ್ದ ಅವರನ್ನು 2009 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಪಾಲಿಟ್‌ಬ್ಯೂರೋದಿಂದ ಕೈಬಿಡಲಾಯಿತು. ಅವರು ಮೂರು ಬಾರಿ ವಿರೋಧ ಪಕ್ಷದ ನಾಯಕರಾಗಿದ್ದರು ಮತ್ತು 2006-2011 ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments