Top Newsಜಿಲ್ಲೆರಾಜಕೀಯರಾಜ್ಯಸುದ್ದಿ

ಕೋಡಿಮಠದ ಶ್ರೀಗಳ ಸ್ಫೋಟಕ ಭವಿಷ್ಯ;ಹಾಸನದಿಂದಲೇ ಮುಂದಿನ ಸಿಎಂ

ಕರ್ನಾಟಕ ಮತ್ತು ದೇಶದ ರಾಜಕಾರಣದ ಬಗ್ಗೆ ಸದಾ ಕುತೂಹಲಕಾರಿ ಭವಿಷ್ಯ ನುಡಿಯುವ ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಸ್ವಾಮೀಜಿ ಅವರು ಹಾಸನದಲ್ಲಿ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.

ಮುಂಬರುವ ದಿನಗಳಲ್ಲಿ ಹಾಸನ ಜಿಲ್ಲೆಯು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾಗಲಿದ್ದು, ದೇಶದ ಪ್ರಧಾನಿ ಅಥವಾ ರಾಜ್ಯದ ಮುಖ್ಯಮಂತ್ರಿ ಹಾಸನದಿಂದಲೇ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ತಾವು ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯ ಅವರ ಬಗ್ಗೆ ನುಡಿದಿದ್ದ ಭವಿಷ್ಯಗಳು ನಿಜವಾಗಿರುವುದನ್ನು ನೆನಪಿಸುತ್ತಾ, ಹೊಸ ಇತಿಹಾಸವೊಂದು ಸೃಷ್ಟಿಯಾಗಲಿದೆ ಎಂದಿದ್ದಾರೆ.

ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಸ್ವಾಮೀಜಿ, ಸದ್ಯದ ಕಾಂಗ್ರೆಸ್ ಸರ್ಕಾರ ಇನ್ನೂ ಎರಡು ವರ್ಷಗಳ ಕಾಲ ಸುಗಮವಾಗಿ ಸಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮುಖ್ಯಮಂತ್ರಿ ಪದವಿಯ ಬದಲಾವಣೆಯ ಬಗ್ಗೆ ಸುಳಿವು ನೀಡುತ್ತಾ, “ಮಾಘ ಅಥವಾ ಫಾಲ್ಗುಣ ಮಾಸದ ಸುಮಾರಿಗೆ ಡಿಕೆಶಿ ಮಂತ್ರಿಯ ಪದವಿ ಕುರಿತು ಮಾರ್ಮಿಕವಾಗಿ ನುಡಿದಿದ್ದಾರೆ. ಅಂದರೆ, ಮುಂದಿನ ದಿನಗಳಲ್ಲಿ ಡಿಕೆಶಿ ಅವರ ಮುಖ್ಯಮಂತ್ರಿ ಆಗುವ ಯೋಗದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

ಮಠಾಧೀಶರು ರಾಜಕಾರಣಿಗಳಿಂದ ದಕ್ಷಿಣೆ ಅಥವಾ ಹಣವನ್ನು ನಿರೀಕ್ಷಿಸಬಾರದು, ಬದಲಿಗೆ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು . ತಮ್ಮ ಮಠಕ್ಕೆ ಬರುವ ಯಾವುದೇ ರಾಜಕಾರಣಿ ಚಾಪೆಯ ಮೇಲೆ ಕೂರಬೇಕೆ ಹೊರತು, ತಮಗೆ ಸನ್ಮಾನ ಮಾಡುವ ಸಂಪ್ರದಾಯವಿಲ್ಲ, ರಾಜಕಾರಣಿಗಳಿಗೆ ಆಶೀರ್ವಾದ ಮಾಡುವ ಶಕ್ತಿ ಮಠಗಳಿಗೆ ಇರಬೇಕೇ ಹೊರತು, ಅವರ ಮುಂದೆ ಕೈವೊಡ್ಡುವ ಸ್ಥಿತಿ ಬರಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ರಾಷ್ಟ್ರ ರಾಜಕಾರಣದ ಬಗ್ಗೆಯೂ ದೊಡ್ಡ ಭವಿಷ್ಯ ನುಡಿದಿರುವ ಕೋಡಿಮಠದ ಶ್ರೀಗಳು, 2029ರ ಲೋಕಸಭೆ ಚುನಾವಣೆಯಲ್ಲಿ ಪ್ರಸ್ತುತ ಇರುವ ಶಕ್ತಿಯೇ (ಬಿಜೆಪಿ/ಮೋದಿ ಬಣ) ಸುಮಾರು 450 ರಿಂದ 472 ಸೀಟುಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂದಿನ 25 ರಿಂದ 28 ವರ್ಷಗಳ ಕಾಲ ದೇಶವನ್ನು ಅಲುಗಾಡಿಸುವಂತಹ ಬೇರೆ ಯಾವುದೇ ಶಕ್ತಿ ಸದ್ಯಕ್ಕೆ ರಾಜಕೀಯದಲ್ಲಿ ಕಾಣುತ್ತಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ. ಹಾಸನ ಜಿಲ್ಲೆಯು ಮತ್ತೊಮ್ಮೆ ‘ಕೆಂಪು ಭಾವುಟ’ ಹಾರಿಸುವಂತಹ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳುವ ಮೂಲಕ ಹೊಸ ರಾಜಕೀಯ ಸಂಚಲನ ಮೂಡಿಸಿದ್ದಾರೆ.

Comments (0)

Your email address will not be published. Required fields are marked *

Back to top button