About Us

ಫ್ರೀಡಂ ಟಿವಿ-ಜನಸಾಮಾನ್ಯರ ಶಕ್ತಿ. ಕನ್ನಡಿಗರ ಸ್ವಾಭಿಮಾನದ ಟಿವಿ ಚಾನೆಲ್. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ಎಲ್ಲಾ ರಾಜ್ಯಗಳಲ್ಲಿ ಪ್ರಸಾರ ಕಾಣುತ್ತಿದೆ. ಜನಸಾಮಾನ್ಯರನ್ನೇ ಆದ್ಯತೆಯಾಗಿಸಿಕೊಂಡು ಸುದ್ದಿ ಹಾಗೂ ಮನೋರಂಜನ ಕಾರ್ಯಕ್ರಮಗಳನ್ನು ನೀಡುವ ಜನಪ್ರಿಯ ವಾಹಿನಿಯಾಗಿದೆ.

ಜನ ಸಾಮಾನ್ಯರು ನಮಗೆ ಮುಖ್ಯರೇ ಹೊರತು ಬೇರೆ ಯಾರೂ ಅಲ್ಲ. ಮಹಾತ್ಮಾಗಾಂಧಿ ಅವರು ಹೇಳಿದಂತೆ ನಮ್ಮದು ಸತ್ಯದೆಡೆಗಿನ ಪಯಣ. ಸತ್ಯವೇ ನಮ್ಮ ಧ್ಯೇಯ, ಅದುವೇ ನಮ್ಮ ನಂಬಿಕೆ.

ನಾವು ಸತ್ಯವನ್ನು ಹೇಳುವಾಗ ಯಾರಿಗೂ ಹೆದರುವುದಿಲ್ಲ. ಯಾರನ್ನೂ ಹೆದರಿಸುವುದಿಲ್ಲ. ನಿಮ್ಮ ಪ್ರೀತಿಯ ಫ್ರೀಡಂ ಟಿವಿ ಬೆಂಗಳೂರಿನ ಸದಾಶಿವನಗರದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನದ ಸ್ಟುಡಿಯೋ ಹೊಂದಿದೆ. ರಾಜ್ಯದ ಜಿಲ್ಲೆ ಮತ್ತು ತಾಲೂಕುಗಳಿಂದ ಸುದ್ದಿ ನೀಡಲು ನಾವು ಅಧ್ಭುತವಾದ ತಂಡವನ್ನು ಹೊಂದಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ವಾರ್ತೆಯನ್ನು ತಂದು ನಿಮಗೆ ತಲುಪಿಸುವುದು ನಮ್ಮ ಜವಾಬ್ದಾರಿ.

ಫ್ರೀಡಂ ಟಿವಿ ಎಂದರೆ ವಸ್ತು ನಿಷ್ಠ ವರದಿಗಾರಿಕೆ, ವೃತ್ತಿಪರ ಸಂಪಾದಕೀಯ ತಂಡ, ಜನಸಾಮಾನ್ಯರ ಪರ ಅಚಲ ನಿಲುವು. ಪಂಚಾಯ್ತಿ ಪಡಸಾಲೆಯಿಂದ ಹಿಡಿದು ವಿಧಾನಸೌಧ, ಸಂಸತ್ತಿನ ಮೊಗಸಾಲೆವರೆಗೂ ಆಡಳಿತದ ಮೇಲೆ ನಮ್ಮದು ಸದಾ ಕಾವಲುಗಣ್ಣು.

ಫ್ರೀಡಂ ಟಿವಿ ಶಿಸ್ತುಬದ್ಧ ಮಾರುಕಟ್ಟೆ ವಿಭಾಗದೊಟ್ಟಿಗೆ ವೃತ್ತಿಪರ ಪತ್ರಕರ್ತರೇ ಕಟ್ಟಿ ನಡೆಸುತ್ತಿರುವ ಮಾಧ್ಯಮ ಸಂಸ್ಥೆ. ಈ ವಾಹಿನಿ ವೀಕ್ಷಿಸಲು ನಿಮ್ಮ ಹತ್ತಿರದ ಕೇಬಲ್ ಆಪರೇಟರ್‌ಗಳನ್ನು ಸಂಪರ್ಕಿಸಿ. ಜತೆಗೆ ಈ ಕೆಳಗಿನ ಡಿಜಿಟಲ್ ವೇದಿಕೆಗಳ ಮೂಲಕವೂ ಫ್ರೀಡಂ ಟಿವಿ ಸದಾ ಲಭ್ಯವಿರುತ್ತದೆ. ಫ್ರೀಡಂ ಟಿವಿ ವೀಕ್ಷಿಸಿ, ಜಾಹೀರಾತು ನೀಡಿ. ಹರಸಿ-ಹಾರೈಸಿ, ಪ್ರೀತಿ ತೋರಿಸಿ. ನಿಮ್ಮ ನಿರೀಕ್ಷೆಯನ್ನು ನಾವೆಂದೂ ಹುಸಿ ಮಾಡುವುದಿಲ್ಲ.

Click Facebook
https://www.facebook.com/reel/1105151777581528

ಫ್ರೀಡಂ ಟಿ.ವಿ. ಸುದ್ದಿಗಳು ತಲುಪುವ ಈ ವಾಟ್ಸ್ ಗ್ರೂಪಿಗೆ ಸೇರಿ…
WhatsApp: https://whatsapp.com/channel/0029VadQ1IG9MF8sMpN1MV2Y

ಫ್ರೀಡಂ ಟಿ.ವಿ.ಯೂಟ್ಯೂಬ್ ಫಾಲೋ ಮಾಡಿ
YoutTube Channel: https://l1nq.com/l6iIX

ಫ್ರೀಡಂ ಟಿ.ವಿ. ಫೇಸ್ಬುಕ್ ಪೇಜ್ ಫಾಲೋ ಮಾಡಿ
Facebook: https://www.facebook.com/share/YyACzKF77X5pN54R/?mibextid=LQQJ4d

ಫ್ರೀಡಂ ಟಿ.ವಿ. ಇನ್ಸ್ಟಾಗ್ರಾಂ ಫಾಲೋ ಮಾಡಿ
Instagram: https: instagram.com/freedomtvlive/tagged

ಫ್ರೀಡಂ ಟಿ.ವಿ. ಟ್ವಿಟರ್ ಪೇಜ್ ಫಾಲೋ ಮಾಡಿ
Twitter: https:twitter.com/FreedomTvLive

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

www.freedomtvlive.com
ಫ್ರೀಡಂ ಟಿ.ವಿ.
ಜನಸಾಮಾನ್ಯರ ಶಕ್ತಿ

Verified by MonsterInsights