ತುಮಕೂರು: ಮಾದಿಗ ಒಳಮೀಸಲಾತಿ ಜಾರಿ ಮಾಡದೇ ರಾಜ್ಯ ಸರ್ಕಾರ ಕುಂಟು ನೆಪ ನೀಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ಎ. ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು ಮಾದಿಗ ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯ ಬಂದ್ ಮಾಡಿ ರಾಜ್ಯ ಸರ್ಕಾರ ನಿಷ್ಕ್ರಿಯಗೊಳುವಂತೆ ಮಾಡುತ್ತೇವೆ ಎಂದು ಕಿಡಿಕಾರಿದ್ರು.
3 ದಶಕಗಳ ಮಾದಿಗ ಸಮುದಾಯದ ಹೋರಾಟದ ಫಲ ಇದು. ಇದೇ ಆಗಸ್ಟ್ 1 ಕ್ಕೆ ಸುಪ್ರೀಂಕೋರ್ಟ್ ಆದೇಶ ಬಂದು ಒಂದು ವರ್ಷ ಆಗುತ್ತದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಕ್ಯಾಬಿನೆಟ್ನಲ್ಲೇ, ಒಳಮೀಸಲಾತಿಗೆ ಜಾರಿಗೆ ತರುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡಿತ್ತು. ಆದ್ರೆ ಇದೀಗ ಸರ್ಕಾರ ಕುಂಟು ನೆಪ ಹೇಳುತ್ತಿದೆ ಎಂದು ಕಿಡಿಕಾರಿದ್ರು.
ನಾಗಮೋಹನ್ ದಾಸ್ ಕಮಿಷನ್ ನೇಮಕ ಮಾಡಿದ್ದೇವೆಂದು ಹೇಳಿ ಜಾರಿ ಮಾಡೋದನ್ನ ನಿಧಾನಗತಿ ಮಾಡ್ತಿದ್ದಾರೆ. ಬರುವ ಆಗಸ್ಟ್ 1 ರಂದು ಮಾದಿಗ ಸಮುದಾಯದವರು ರಾಜ್ಯದ ಎಲ್ಲಾ ಡಿಸಿ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ರು.