ರಾಯಚೂರು:ರಾಯಚೂರಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕೋರೆ ಇಲ್ಲದಂತಾಗಿದೆ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುವ ಮೂಲಕವೇ ಶಾಸಕಿಯಾಗಿದ್ದ ಕರೆಮ್ಮ ನಾಯಕ್ ಅವರ ಮಗ, ಸಹೋದರರೇ ಈಗ ಅಕ್ರಮ ಮರಳು ಸಾಗಾಟ ಕಿಂಗ್ಪಿನ್ಗಳಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮರಳು ಟ್ರ್ಯಾಕ್ಟರ್ ಸೀಜ್ ಮಾಡಿದ್ದ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಸಹ ಇದೆ.
ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯ ಹನುಮಂತರಾಯ ನಾಯಕ್ ಎಂಬ ಪೇದೆಗೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ನಾಯಕ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ರಾಮಣ್ಣ ನಾಯಕ್ ಸೇರಿದಂತೆ 8 ಮಂದಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದೇವದುರ್ಗದ ಐ.ಬಿಗೆ ಪೇದೆ ಹನುಮಂತರಾಯನನ್ನು ಕರೆಸಿಕೊಂಡು ಕೊಠಡಿ ಬಂದ್ ಮಾಡಿ ಕರೆಂಟ್ ಹಾಗೂ ಸಿಸಿಟಿವಿ ಸಂಪರ್ಕ ತೆಗೆದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಪೊಲೀಸರ ವಿರುದ್ಧ ಶಾಸಕಿ ಕರೆಮ್ಮ ನಾಯಕ್ ಪ್ರತಿಭಟನೆ
ಇನ್ನು ಪೊಲೀಸರ ವಿರುದ್ಧ ಶಾಸಕಿ ಕರೆಮ್ಮ ನಾಯಕ್ ಬೆಂಬಲಿಗರ ಜೊತೆ ಕಳೆದ ರಾತ್ರಿ ದೇವದುರ್ಗ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಬೇಕಂತಲೆ ಪೊಲೀಸರು ಪಿತೂರಿ ಮಾಡಿ ಈ ರೀತಿ ಆರೋಪ ಮಾಡಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ಮುಂದೆ ಬಿಟ್ಟು ಕುತಂತ್ರ ರೂಪಿಸಿದ್ದಾರೆ. ಈ ಕೃತ್ಯ ರಾಜಕೀಯ ಪ್ರೇರಿತ ಎಂದು ಶಾಸಕಿ ಕರೆಮ್ಮ ನಾಯಕ್ ಆರೋಪ ಮಾಡಿದ್ದಾರೆ.