Wednesday, January 28, 2026
23.8 C
Bengaluru
Google search engine
LIVE
ಮನೆರಾಜಕೀಯಸಿಎಂ ಸಿದ್ದು ತವರಲ್ಲಿ ಅಮಿತ್​​ ಶಾ ಅಬ್ಬರದ ಭಾಷಣ

ಸಿಎಂ ಸಿದ್ದು ತವರಲ್ಲಿ ಅಮಿತ್​​ ಶಾ ಅಬ್ಬರದ ಭಾಷಣ

ಮೈಸೂರು : ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್​ ಶಾ ಭಾಗಿಯಾಗಿದರು. ಈ ವೇಳೆ ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ನಿರ್ಮಿಸಿರುವ ಶಿಲ್ಪಿ ಅರುಣ್​ ಯೋಗಿರಾಜ್​ ಅವರನ್ನು ಸನ್ಮಾಸಿದರು.

ನಂತರ ಅಮಿತ್​ ಶಾ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ಸಾಂಸ್ಕೃತಿ ಪುನರ್​​ ಪ್ರತಿಷ್ಠಾಪನೆಯಾಗುತ್ತಿದೆ. ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಕಾಶಿ ಉಜ್ಜಯಿನಿ ನದ್ರಿನಾಥ್​​ ಕಾರಿಡಾರ್​​ ಅಭಿವೃದ್ದಿ ಆಗಿವೆ. ದೇಶದಲ್ಲಿ ಆಯುರ್ವೇದ, ಯೋಗ ಭಾಷೆ  ಸಂಸ್ಕೃತಿ ಪುನರ್​​ ಸ್ಥಾಪನೆ ಆಗುತ್ತಿದೆ. ಸುತ್ತೂರು ಮಠವೂ ಅಯೋಧ್ಯೆಯಲ್ಇ ಅತಿಥಿ ಗೃಹ ನಿರ್ಮಿಸುತ್ತಿದೆ ಎಂದಿದ್ದಾರೆ.

ಸುತ್ತೂರು  ಸ್ವಾಮೀಜಿ ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ಸುತ್ತೂರು ಮಠದ 24 ಪೀಠಾಧ್ಯಕ್ಷರನ್ನು ಸ್ಮರಿಸುತ್ತೇನೆ. ಕರ್ನಾಟಕದ ಈ ಪವಿತ್ರ ನೆಲದಲ್ಲಿ ನಿಂತು ಬಸವಣ್ಣನವರನ್ನು ನೆನೆಯುತ್ತೇನೆ. ಬಸವಣ್ಣ ಅವರು ಒಂದು ವರ್ಗಕ್ಕೆ ಸೀಮಿತವಾಗಿರದೆ ದೇಶದ ಕೋಟಿ ಕೋಟಿ ಜನರಿಗೆ ಭಕ್ತಿ ಭಾವ ತುಂಬಿದವರಾಗಿದ್ದಾರೆ ಅವರನ್ನು ಕೂಡ ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೂತ್ತೇನೆ ಎಂದಿದ್ದಾರೆ.

ಸುತ್ತೂರು ಮಠಾಧಿಶರು ಎಲ್ಲರೂ ನಿಸ್ವಾರ್ಥವಾದ ಸೇವೆಯನ್ನು ಸಲ್ಲಲಿಸಿದ್ದಾರೆ. ಅನ್ನ ಅಕ್ಷರ ದಾಸೋಹ ನೀಡುತ್ತಿದೆ. ಲಕ್ಷಾಂತರ ಜನರಿಗೆ ಬೆಳಕನ್ನು ಚೆಲ್ಲುವ ಕೆಲಸ ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಅವರ ಸೇವೆಯನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments