Tuesday, July 1, 2025
27.8 C
Bengaluru
Google search engine
LIVE
ಮನೆರಾಜ್ಯಹುಬ್ಬಳ್ಳಿಯಲ್ಲಿ ರಾಮ ಭಕ್ತರ ವಿನೂತನ ಸಂಭ್ರಮಾಚರಣೆ

ಹುಬ್ಬಳ್ಳಿಯಲ್ಲಿ ರಾಮ ಭಕ್ತರ ವಿನೂತನ ಸಂಭ್ರಮಾಚರಣೆ

 ಹುಬ್ಬಳ್ಳಿ : ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನಾ ಕಾರ್ಯಕರ್ತರು ವಿಭಿನ್ನವಾಗಿ ತಮ್ಮ ಹರಕೆ ತೀರಿಸಿದ್ದಾರೆ. ನಗರದ ದಾಜಿಬಾನ ಪೇಟೆಯ ತುಳಜಭವಾನಿ ದೇವಸ್ಥಾನದಿಂದ, ಗೌಳಿ ಗಲ್ಲಿಯ ರಾಮಮಂದಿರ ದೇವಸ್ಥಾನದವರೆಗೂ ದೀರ್ಘ ದಂಡ ನಮಸ್ಕಾರ ಹಾಕಿದರು.

ಸುಮಾರು ಒಂದು ಕಿಲೋ ಮೀಟರ್ ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ‌ಹರಕೆ ಹೊತ್ತಿದ್ದರು. ಅದರಂತೆ ನಾಳೆ ಜನೆವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾನೆ ನಡೆಯಲಿದ್ದು, ಹಾಗಾಗಿ ಈಗ ಕಾರ್ಯಕರ್ತರು ಹರಕೆ ತೀರಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.‌ ಇನ್ನೂ ಜೈ ಶ್ರೀರಾಮ್ ಘೋಷಣೆಯೊಂದಿಗೆ ದೀರ್ಘ ದಂಡ ನಮಸ್ಕಾರ ಹಾಕಿದ ಕಾರ್ಯಕರ್ತರು, ರಾಮನ ಹಾಡಿಗೆ ಹೆಜ್ಜೆ ಹಾಕಿದರು. ಅಯೋಧ್ಯೆಯಲ್ಲಿ ದೇವಸ್ಥಾನವಾಗಲಿ ಎಂದು ಹರಕೆ ಹೊತ್ತಿದ್ದೆವು. ಅದರ ಪ್ರಕಾರ ದೀರ್ಘ ದಂಡ ನಮಸ್ಕಾರ ಮಾಡಿ ಹರಕೆ ತೀರಿಸಿದ್ದೇವೆ. ರಾಮನ ಪ್ರತಿಷ್ಠಾಪನೆ ವೇಳೆ ಧಾರವಾಡ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿರುವುದಾಗಿ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments