Monday, December 8, 2025
25.6 C
Bengaluru
Google search engine
LIVE
ಮನೆದೇಶ/ವಿದೇಶರಾಮಮಂದಿರದ ಗೋಪುರದ ಮೇಲೆ ‘ಧರ್ಮಧ್ವಜ’ ಸ್ಥಾಪಿಸಿದ ಮೋದಿ

ರಾಮಮಂದಿರದ ಗೋಪುರದ ಮೇಲೆ ‘ಧರ್ಮಧ್ವಜ’ ಸ್ಥಾಪಿಸಿದ ಮೋದಿ

ಅಯೋಧ್ಯೆ: ಉತ್ತರ ಪ್ರದೇಶದ ಪುಣ್ಯಕ್ಷೇತ್ರ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಭಿಜಿತ್​​​​​ ಮುಹೂರ್ತದಲ್ಲಿ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಧರ್ಮ ಧ್ವಜದ ಧ್ವಜಾರೋಹಣವನ್ನು ನೆರವೇರಿಸಿದ್ದಾರೆ.. ಅಯೋಧ್ಯೆಯಲ್ಲಿ ರಾಮಭಕ್ತರು ಬಹುಕಾಲದಿಂದ ಕಾಯುತ್ತಿದ್ದ ಐತಿಹಾಸಿಕ ಕ್ಷಣವೊಂದು ಇಂದು ನರೆವೇರಿತು.

22 ಅಡಿ ಎತ್ತರದ ಕೇಸರಿ ಧ್ವಜವನ್ನು ಹಾರಿಸಿ, ಸಾಧುಗಳು, ಗಣ್ಯರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಪ್ರಧಾನಿಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಾಥ್‌ ನೀಡಿದರು.

ಮೋದಿ ಅವರು ಧ್ವಜಾರೋಹಣ ಮಾಡುತ್ತಿದ್ದಂತೆ ಅಯೋಧ್ಯೆಯಲ್ಲಿ ಸೇರಿದ್ದ ಸಾವಿರಾರು ರಾಮಭಕ್ತರು ಘಂಟಾಘೋಷಗಳ ನಾದದೊಂದಿಗೆ ಪ್ರಭು ರಾಮಚಂದ್ರನ ನಾಮ ಸ್ಮರಣೆ ಮಾಡಿದರು. ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಏಳು ದೇವಾಲಯಗಳಿಗೆ ಭೇಟಿ ನೀಡಿದ ಮೋದಿ ಮಾತಾ ಅನ್ನಪೂರ್ಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ರಾಮ ದರ್ಬಾರ್‌ನಲ್ಲಿ ರಾಮಲಲ್ಲಾಗೆ ಪೂಜೆ ನೆರವೇರಿಸಿದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಅವರೊಂದಿಗೆ ಹಾಜರಿದ್ದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments