ಬೆಂಗಳೂರು: ಆಟ ಆಡುತ್ತಿದ್ದಾಗ ಬಾಲಕಿ ಮೇಲೆ ನೀರಿನ ಟ್ಯಾಂಕರ್ ಹರಿದು ಸಾವನ್ನಪ್ಪಿರುವ ಘಟನೆ ಹೆಚ್ಎಎಲ್ ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ ನಡೆದಿದೆ..
9 ವರ್ಷದ ಬಾಲಕಿ ಅನುಶ್ರೀ ಮೇಲೆ ವಾಟರ್ ಟ್ಯಾಂಕರ್ ಹರಿದು, ಸ್ಥಳದಲ್ಲೇ ಮೃತಪಟ್ಟಿರುವ ಬಾಲಕಿ.
ಬಾಲಕಿಯ ಕುಟುಂಬವು ಗುಲ್ಬರ್ಗ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಾ ವಾಸಿಸುತ್ತಿದ್ದಾರೆ.
ಬಾಲಕಿ ರಸ್ತೆಯಲ್ಲಿ ಆಟ ಆಡುತ್ತಿದ್ದಾಗ ಬಂದ ನೀರಿನ ಟ್ಯಾಂಕರ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಜೀವನ್ ಭೀಮನಗರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


