ಬದರೀನಾಥ ದೇವಾಲಯಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿ ಬದರೀನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.. ರಜನಿಕಾಂತ್ ಅವರನ್ನ ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಸದಸ್ಯರು ಆದರದಿಂದ ಬರ ಮಾಡಿಕೊಂಡಿದ್ದಾರೆ.. ನಿನ್ನೆ ದೇಗುಲಕ್ಕೆ ರಜನಿಕಾಂತ್ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡಿದ್ದಾರೆ..
ಚಳಿಗಾಲ ಆರಂಭದ ಹಿನ್ನೆಲೆಯಲ್ಲಿ ಅಕ್ಟೋಬರ್ 23 ರಂದು ಕೇದಾರನಾಥ ಧಾಮದ ದ್ವಾರಗಳನ್ನು ಮುಚ್ಚಲಾಗುವುದು ಎಂದು ಬದರಿನಾಥ ಕೇದಾರನಾಥ ದೇವಾಲಯ ಸಮಿತಿ ತಿಳಿಸಿದೆ. ನವೆಂಬರ್ 25 ರಂದು ಮಧ್ಯಾಹ್ನ 2:56 ಕ್ಕೆ ಬದರಿನಾಥ ಧಾಮದ ದ್ವಾರಗಳನ್ನೂ ಮುಚ್ಚಲಾಗುವುದು ಎಂದು ಸಮಿತಿಯು ಮಾಹಿತಿ ನೀಡಿದೆ. ಬೆಚ್ಚಗಿನ ಉಡುಪು ಧರಿಸಿ, ರಜನಿಕಾಂತ್ ಅವರು ಯಾತ್ರಾ ಮಾರ್ಗದಲ್ಲಿ ಸಾಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


