Top Newsರಾಜಕೀಯ

ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ..!

ಬೆಳಗಾವಿ: ಪೊಲೀಸರ ಎದುರಿನಲ್ಲಿಯೇ  ಸಾರ್ವಜನಿಕವಾಗಿ ಗುಂಡು ಹಾರಿಸುವ ಮೂಲಕ ಬಿಜೆಪಿ ಶಾಸಕ ರಮೇಶ್​​ ಜಾರಕಿಹೊಳಿ ಪುತ್ರ ಸಂತೋಷ್​​ ಜಾರಕಿಹೊಳಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಗೋಕಾಕ್​​ನಲ್ಲಿ ನಡೆದ ಲಕ್ಷ್ಮೀದೇವಿ ಜಾತ್ರೆಗೆ ಬೆಂಬಲಿಗರೊಂದಿಗೆ ಆಗಮಿಸಿದ ಸಂತೋಷ್​ ಜಾರಕಿಹೊಳಿ ಸಾರ್ವಜನಿಕವಾಗಿ ಬಂದೂಕು ಹಿಡಿದು ಗುಂಡು ಹಾರಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಎಲ್ಲೆಡೆ ಭಾರಿ ವೈರಲ್​ ಆಗಿದೆ.

ಸಾವಿರಾರು ಜನರು ಸೇರಿರುವ ಇಂತಹ ಸಮಾರಂಭದಲ್ಲಿ ಸಂತೋಷ್​ ಜಾರಕಿಹೊಳಿ ಗುಂಡು ಹಾರಿಸಿ ಸಂಭ್ರಮಿಸುವ ಮೂಲಕ ಮೊಂಡಾಟ ಮೆರೆದಿದ್ಧಾರೆ. ಈ ವೇಳೆ ಅಭಿಮಾನಿಗಳು ಸಂತೋಷ್​ ಪರವಾಗಿ ಘೋಷಣೆ ಕೂಗಿದ್ದಾರೆ. ಘಟನೆ ಸಂಬಂಧ ಗೋಕಾಕ್​ ಶಹರ ಠಾಣೆ ಪೊಲೀಸರು ಸಂತೋಷ್​ ಮೇಲೆ ಎಫ್​ಐಆರ್​​ ದಾಖಲಿಸಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button