ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆಯಿಂದ ದಟ್ಟ ಮಂಜು ಕವಿದ ವಾತಾವರಣ ಹಿನ್ನೆಲೆ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಕಡಿಮೆ ಗೋಚರತೆ ಪರಿಣಾಮದಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮೂಲಕ ಇಂಡಿಗೋ ಸಂಸ್ಥೆ ಮಾಹಿತಿ ನೀಡಿದೆ.
ಈಗಾಗಲೇ ದೆಹಲಿಯಲ್ಲೂ ದಟ್ಟ ಮಂಜು ಹಿನ್ನೆಲೆ, ದೇಶದ ಇತರೆ ನಗರಗಳಿಗೆ ಸಂಪರ್ಕಿಸುವ 200ಕ್ಕೂ ಹೆಚ್ಚು ವಿಮಾನಗಳ ಹಾರಟದಲ್ಲಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣದಿಂದಾಗಿ ಕಡಿಮೆ ಗೋಚರತೆ ಪರಿಸ್ಥಿತಿ ಇದೆ. ಇದು, ವಿಮಾನಗಳ ಕಾರ್ಯಾಚರಣೆಯ ವೇಳಾಪಟ್ಟಿಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ನಿಮ್ಮ ಫ್ಲೈಟ್ ಸ್ಟೇಟಸ್ಕುರಿತು ಅಪ್‌ಡೇಟ್ ಆಗಿರಲು ನಾವು ನಿಮ್ಮನ್ನು ವಿನಂತಿಸುತ್ತೇವೆ ಎಂದು ಇಂಡಿಗೋ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದೆ.