Friday, September 12, 2025
20.8 C
Bengaluru
Google search engine
LIVE
ಮನೆ#Exclusive NewsTop Newsಮಹಿಳೆಯೊಂದಿಗೆ ಅಸಭ್ಯ ವರ್ತನೆ ಸಾಬೀತಾದರೇ ಸೇವೆಯಿಂದ ನಿವೃತ್ತಿ; ಸಂಕೇಶ್ವರ PSI

ಮಹಿಳೆಯೊಂದಿಗೆ ಅಸಭ್ಯ ವರ್ತನೆ ಸಾಬೀತಾದರೇ ಸೇವೆಯಿಂದ ನಿವೃತ್ತಿ; ಸಂಕೇಶ್ವರ PSI

ಸಂಕೇಶ್ವರ; ಮಹಿಳೆಯೋರ್ವರಿಗೆ ಕಿರುಕುಳ ನೀಡಿದ ಆರೋಪದಡಿ ನೀಡಲಾದ ದೂರಿನ ಮೇರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡುವುದಾಗಿ ಬೆಳಗಾವಿ ಜಿಲ್ಲಾ ಎಸ್‌ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದರು. ಇದೀಗ ಈ ಪ್ರರಣಕ್ಕೆ ಸಂಬಂಧಿಸಿದ‍ಂತೆ ಸ್ಪಷ್ಟನೆ ನೀಡಿರುವ ಸಂಕೇಶ್ವರ ಪಿಎಸ್ ಐ ನರಸಿಂಹರಾಜು, ನನ್ನ ವಿರುದ್ದ ಸಂಕೇಶ್ವರದ ‌ಸಿಪಿಐ ಅವಜಿ ಹಾಗೂ ಸಿಬ್ಬಂದಿಗಳು ಸೇರಿ ಷಢ್ಯಂತ್ರ ಮಾಡಿ ನನ್ನ ಅಮಾನತು ಮಾಡುವ ಮೂಲಕ ಬಲಿಪಶು ಮಾಡಲಾಗಿದೆ. ನಾನು ಈ ಭಾಗದ ಯಾವದೇ ಮಹಿಳೆಗೆ ಕಿರುಕುಳ ಕೊಟ್ಟ ಬಗ್ಗೆ ಉದಾಹರಣೆಗೆ ನೀಡಿದರೆ ನಾನು ಸೇವೆಯಿಂದ ನಿವೃತ್ತಿ ಆಗುತ್ತೇನೆ ಎಂದು ಅಮಾನತು ಗೊಂಡಿರುವ ಪಿಎಸ್ ಐ ನರಸಿಂಹರಾಜು ಅವರು ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಬ್ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನರಸಿಂಹರಾಜು, ನನ್ನನ್ನು ಸಂಕೇಶ್ವರ ಠಾಣೆಯಿಂದ ಹೊರಹಾಕಲು ಸಿಪಿಐ ಜೊತೆ ಇಬ್ಬರು ಸಿಬ್ಬಂದಿಗಳಾದ ನಾಗನೂರೆ ಹಾಗೂ ಜಂಬಗಿ ಎನ್ನುವರು ಕೂಡಾ ಶಾಮೀಲಾಗಿರುವದು ಸಂಶಯ ಇದೆ ಎಂದು ತಿಳಿಸಿದರು. ನಮ್ಮ ವಿರುದ್ದ ಷಢ್ಯಂತ್ರ ಬ್ಲಾಕ್ ಮೇಲ್ ಮಾಡಲಾಗಿದೆ. ನಾನು ನಿರಪರಾಧಿ ಯಾಗಿದ್ದೇನೆ. ಜಂಬಗಿ ನಾಗನೂರೆ ಇವರು ಇದರ ಬಗ್ಗೆ ಪಿತೂರಿ ಇರಬಹುದು ಎನ್ನುವ ಸಂಶಯ ಇದೆ ಎಂದದ್ದಾರೆ.

ನಾನು‌ ಈ ವಿಷಯವನ್ನು ನ್ಯಾಯಾಲಯದ ಲ್ಲಿ ಕಾನೂನಿನಲ್ಲಿ ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮುಖಾಂತರ ನ್ಯಾಯ ಪಡೆಯುತ್ತೇನೆ. ಈ ವಿಷಯವನ್ನು ಸವಾಲಾಗಿ ಸ್ವೀಕರಾ ಮಾಡುತ್ತೇನೆ ಎಂದರು. ಒಂದು ಸಣ್ಣ ವಿಷಯಕ್ಕೆ ಸಿಪಿಐ ಜೊತೆ ಭಿನ್ನಾಭಿಪ್ರಾಯ ಬಂತು. 3 ಲಕ್ಷ ವೆಚ್ಚದಲ್ಲಿ ಸಿಪಿಐ ರೂಮ್ ಸುಧಾರಣೆಗಾಗಿ ಖರ್ಚು ಮಾಡಿದ್ದರು. ಇದರ ವಿರುದ್ದ ಧ್ವನಿ ಎತ್ತಿರುವ ನನ್ನನ್ನು ಈ ಊರಿನಿಂದ ಹೊರಹಾಕಲು ಪ್ರಯತ್ನದಿಂದ ಸಿಪಿಐ ಹಾಗೂ ಕೆಲ ಸಿಬ್ಬಂದಿಗಳು ಸೇರಿ ಈ ರೀತಿಯಾಗಿ ನನ್ನನ್ನು ತೇಜೋವಧೆ ಮಾಡಲಾಗಿದೆ ಎಂದು ಹೇಳಿದರು.

ಘಟನೆ ವಿವರ;
ಯಾವದೇ ಸತ್ಯಾಂಶವನ್ನು ಅರಿಯದೆ, ನನ್ನ ಕರೆದು ವಿಚಾರಣೆ ಮಾಡದೆ ಅಮಾನತು ಮಾಡಲಾಗಿದೆ. ಒತ್ತಾಯ ಪೂರ್ವಕವಾಗಿ ಮಹಿಳೆ ಕಡೆಯಿಂದ ಬರೆಯಿಸಿ ಕೊಳ್ಳಲಾಗಿದೆ. ನನ್ನ ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ. ಇದರಲ್ಲಿ ಸತ್ತಾಂಶ ಇಲ್ಲ. ಜಿಲ್ಲಾ ಪೊಲೀಸ ವರಿಷ್ಠ ಭೀಮಾಶಂಕರ ಗುಳೇದ ಅವರು ಏಕಪಕ್ಷೀಯವಾಗಿ ಅಮಾನತು ಮಾಡಿದ್ದಾರೆ ಎಂದು ದೂರಿದರು. ಮಹಿಳೆಯೋರ್ವಳು ಅಕ್ಕಪಕ್ಕ ದವರ ಜೊತೆ ತಂಟೆ ಮಾಡಿದ್ದರು. ಅವರಿಗೆ ರಕ್ಷಣೆಗಾಗಿ ನನ್ನ ನಂಬರ ನೀಡಿದ್ದೇನೆ. ಅವರಿಗೆ ಮಕ್ಕಳ ಅನಾರೋಗ್ಯ ಹಿನ್ನೆಲೆಯಲ್ಲಿ ಆರ್ಥಿಕ‌ ಸಹಾಯ ಮಾಡಿದ್ದೇವೆ. ವಿದ್ಯಾ ಗೋಲ್ಡ್ ಜುವೇಲರಸ್ ನಲ್ಲಿ 20 ಸಾವಿರ ಚಿನ್ನ ಕೊಡಿಸಿದ್ದೇವೆ. ಗೆಳೆಯರ ಹಾಗೆ ಇದ್ದೇವೆ ಇದನ್ನು ನನ್ನ ತೇತೋವಧೆಗೆ ಬಳಸಲಾಗಿದೆ ಎಂದರು.

ಕೆಲ ಪೊಲೀಸ ಸಿಬ್ಬಂದಿಗಳು ಸಂಕೇಶ್ವರದ ಲ್ಲಿ ಪ್ಲಾಟ್ ಗಳು ಹಾಗೂ ಬಿಜನೇಸ್ ಮಾಡಿಕೊಂಡಿದ್ದಾರೆ. ಅದನ್ನು ವಿರೋಧ ಮಾಡಿದ್ದಕ್ಕೆ ನನ್ನನ್ನ ಗುರಿ‌ ಮಾಡಲಾಯಿತು. ಹಿಂದೆಯಿಂದಲು ನನ್ನ ತೇರಜೋವದೆ ಮಾಡುವ‌ ಕೆಲಸ ಮಾಡಲಾಗಿದೆ. ಅವಜಿ ಅವರಿಗೆ ನನ್ನ ಮೇಲೆ ಎನೋ ಅಸಮಾಧಾನ ಇತ್ತು ಗೊತ್ತಿಲ್ಲ. ಮಹಿಳೆ ಮಾಡಿದ ಕರೆಗಾಗಿ ನೇರವಾಗಿ ರಾತ್ರಿ ಹೆಣ್ಣುಮಗಳ ಮನೆಗೆ ಹೋಗಿ ಅರ್ಜಿ ಬರೆಯಿಸಿಕೊಂಡು ಎಸ್ ಪಿ ಅವರಿಗೆ ನೀಡಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಪೊಲೀಸ ವರಿಷ್ಠರು ನನ್ನ ವಿಚಾರಣೆ ಮಾಡದೆ ಆ ಮಹಿಳೆಯನ್ನು ಕರೆದು ವಿಚಾರಣೆ ಮಾಡದೆ. ರಾತ್ರಿ ಮಹಿಳೆ ಕಡೆಯಿಂದ ಒತ್ತಾಯ ಪೂರ್ವಕವಾಗಿ ಅರ್ಜಿ ಬರೆಸಿಕೊಂಡು ಈ ರೀತಿಯಾಗಿ ನನ್ನನ್ನು ಅಮಾನತು ಮಾಡಲಾಗಿದೆ.

ನಮ್ಮನ್ನು ಬ್ಲಾಕ್ ಮೇಲ್ ಮಾಡುವ ರೀತಿ ಮಾಡಲಾಗಿದೆ. ಆ ಮಹಿಳೆ ಮೇಲೆ ನಮಗೆ ಯಾವದೆ ರೀತಿ ದ್ವೇಷ ಇಲ್ಲ. ಇಲ್ಲಿಯ ವರೆಗೆ ಹಿತ್ತಲಮನಿ ಸೇರಿದಂತೆ ಕೆಲವು ಅಧಿಕಾರಿ, ಸಿಬ್ಬಂದಿ ಅವರನ್ನು ಬಲಿಪಶು ಮಾಡಿದ್ದಾರೆ. ಸುಮಾರ ವರ್ಷಗಳಿಂದ ಸಂಕೇಶ್ವರದಲ್ಲಿ ಕೆಲ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಆಗು ಹೋಗುಗಳ ಬಗ್ಗೆ ಅವರು ಮಾಹಿತಿ ಪಡೆದು ಈ ರೀತಿಯ ಷಢ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಪೂರ್ವ ನಿಯೋಜಿತ ಪ್ರಯತ್ನ ಮಾಡಿ ನನ್ನ ಸಿಕ್ಕಿಸಲಾಗಿದೆ. ಆ ಮಹಿಳೆಗೆ ಮಾನವೀಯತೆಯ ನೆಲೆ‌ ಮೇಲೆ ನಾನು‌ ಸಹಾಯ ಮಾಡಿದ್ದೇನೆ. ಸಿಪಿಐ ಅವಜಿ ಅವರು ಆ ಮಹಿಳೆ ಮನೆಗೆ ಹೋಗುವಾಗ ಯಾವುದೇ ಮಹಿಳಾ ಸಿಬ್ಬಂದಿ ಕರೆದುಕೊಂಡು ಹೋಗದೆ ತಾವೇ ಸ್ವತಃ ಹೋಗಿರುವದು ಸರಿನಾ?.
ಸಂಕೇಶ್ವರದ ‌ಪೊಲೀಸ ಸಿಬ್ಬಂದಿಗಳು ಠಾಣೆಗೆ ಬರುವ ಜನರಿಗೆ ನ್ಯಾಯ ನೀಡಲ್ಲೊ. ಅರ್ಜಿ ಕೊಟ್ಟರೆ ನಾಳೆ ಬಾ ಅನತಾರೆ ಎಂದು ಅಮಾನತಾದ ಪಿಎಸ್ ಐ ನರಸಿಂಹರಾಜು ಹೇಳಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments