ಸುಲಭದ ತುತ್ತನ್ನು ಮಣ್ಣುಪಾಲು ಮಾಡಿಕೊಂಡ ಕಾಂಗ್ರೆಸ್..!
೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ನಿಖರವಾದ ನಂಬರ್ ಭವಿಷ್ಯ ನುಡಿದ ಡಿಕೆಶಿ ಲೋಕಸಮರದಲ್ಲಿ ಕನ್‌ಫ್ಯೂಸ್ ಆದ್ರ?
೧೮-೨೦ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ಗೆ ಒಂದಕಿ ದಾಟುವುದೂ ಕಷ್ಟವಾಯಿತ್ತಾ?
ಗ್ಯಾರಂಟಿ ನಂಬಿಕೆಟ್ರ ಕಾಂಗ್ರೆಸ್ ನಾಯಕರು..!
ಟಿಕೆಟ್ ಲಾಭಿಯಿಂದ ನಾಯಕರ ಶೀತಲಸಮರ
ಪ್ರಭಾವಿ ಮಂತ್ರಿಗಳ ಹೆಗಲಿಗೆ ಜವಾಬ್ದಾರಿ ಹಾಕಿ ಕೆಟ್ರ..?
ನಾಯಕರ ಒಣ ಪ್ರತಿಷ್ಠೆಯಿಂದ ಕ್ಷೇತ್ರ ಕಳೆದುಕೊಂಡ ಕಾಂಗ್ರೆಸ್
ಕೇಂದ್ರ ಬಿಜೆಪಿಯ ಆಡಳಿತದ ವೈಫಲ್ಯವನ್ನು ಸರಿಯಾಗಿ ಬಳಸಿಕೊಳ್ಳದಿರುವುದು.
೨೦೨೩ರ ಗೆಲುವು ಮತ್ತು ಅಧಿಕಾರದಿಂದಾಗಿ ಪಕ್ಷದ ಮುಖಂಡರನ್ನು ಪರಿಗಣಿಸದಿರುವುದು
ಸುಲಭವಾಗಿ ಗೆಲ್ಲುವ ಕ್ಷೇತ್ರಗಳನ್ನು ಯಾವ ಯಾವ ಕ್ಷೇತ್ರಗಳನ್ನು ಕಾಂಗ್ರೆಸ್ ಸುಲಭವಾಗಿ ಕಳೆದುಕೊಳ್ಳಬೇಕಾಯಿತು
೧) ಕೋಲಾರ-ಕೆ.ವಿ.ಗೌತಮ್
——————
ಕಾರಣ:
೧) ಕೊನೆ ಕ್ಷಣದಲ್ಲಿ ಅಭ್ಯರ್ಥಿ ಆಯ್ಕೆ, ಕೆ.ವಿ.ಗೌತಮ್ ಅಲಿಪ್ತ ಬಣದ ನಾಯಕ. ಇತ್ತ ಮುನಿಯಪ್ಪ ಅತ್ತ ಮಾಜಿ ಸ್ಪೀಕರ್ ರಮೇಶ್ ಬಣದ ಆಶೀರ್ವಾದವಿಲ್ಲದೆ ಏಕಾಂಗಿ ಹೋರಾಟ ಮಾಡಿ ಕೇವಲ ಕಡಿಮೆ ಅಂತರದಲ್ಲಿ ಸೋಲನ್ನು ಒಪ್ಪಿಕೊಳ್ಳಬೇಕಾಗಿದೆ.
೨) ಮುನಿಯಪ್ಪ ಬಣ/ಸುರೇಶ್ ಕುಮಾರ್ ಬಣ ಬಡಿದಾಟದಿಂದಾಗಿ ಕಾಂಗ್ರೆಸ್ ಕೋಲಾರ ಲೋಕಸಭಾ ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ಬಿಟ್ಟುಕೊಡುವಂತಾಯಿತು.
೩) ಹೊಸ ಮುಖದ ಅಭ್ಯರ್ಥಿಯಾದರೂ ಮೈತ್ರಿಕೊಟಕ್ಕೆ ಪ್ರಬಲ ಅಭ್ಯರ್ಥಿಯಾಗಿ ರಾಜಕೀಯ ಚಾಣಕ್ಯತೆಯನ್ನು ತೋರಿದ್ದಾರೆ
೪) ೬ ವಿಧಾನಸಭಾ ಕ್ಷೇತ್ರಗಳಲ್ಲಿ ೪ ಕಾಂಗ್ರೆಸ್, ೨ ಜೆಡಿಎಸ್ ಪಾಲು. ಎಲ್ಲಾ ನಾಯಕರು ಪಕ್ಷ ನಿಷ್ಠೆಯನ್ನು ತೋರಿದ್ದರೆ ನಿಜಕ್ಕೂ ಕಾಂಗ್ರೆಸ್ ಗೆಲ್ಲುವ ಕ್ಷೇತ್ರ.
೨) ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ್
—————————-
೧) ಓವರ್ ಕಾನ್ಫಿಡೆನ್ಸ್ ಎಕ್ಸಾಂಪಲ್ ಡಿ.ಕೆ.ಸುರೇಶ್
೨) ಒಕ್ಕಲಿಗ ಮತ ಸೆಳೆಯುವುದರಲ್ಲಿ ವಿಫಲ. ದೇವೇಗೌಡರೇ ಒಕ್ಕಲಿಗರ ಪ್ರಶ್ನಾತೀತ ನಾಯಕ ಎಂದು ಸಾಬೀತು ಮಾಡಿದ್ದಾರೆ.
ಇಡೀ ಒಕ್ಕಲಿಗ ಸಮುದಾಯ
೩) ಪದೇ ಪದೇ ದೇವೇಗೌಡ್ರು ಮತ್ತು ಕುಮಾರಸ್ವಾಮಿ ಬಗ್ಗೆ ಮಾತನಾಡಿ ಒಕ್ಕಲಿಗರ ವಿರೋಧ ಕಟ್ಟಿಕೊಂಡ್ರಾ?
೪) ದಲಿತ, ಅಲ್ಪಸಂಖ್ಯಾತ ಹಾಗೂ ಕೆಲವು ಹಿಂದುಳಿದ ಮತಗಳಿಗೆ ಹೆಚ್ಚು ಓಲೈಕೆ ಮಾಡಿದ್ದೆ ಡಿ.ಕೆ.ಸುರೇಶ್ ಸೋಲಿಗೆ ಕಾರಣವಾಯ್ತಾ?
೫) ಅಣ್ಣನ ಪ್ರಭಾವವನ್ನು ಬಳಸಿಕೊಳ್ಳದೆ ಇರುವುದು ಸಹ ಈ ಬಾರಿ ಡಿ.ಕೆ.ಸುರೇಶ್ ಸೋಲು ಕಾಣಬೇಕಾಯಿತು. ಕೇವಲ ಒಂದು ದಿನ ಪ್ರಚಾರಕ್ಕೆ ಭಾಗಿಯಾದ ಡಿಕೆಶಿ
೬) ೪ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ೩, ಬಿಜೆಪಿ ೧ ಕ್ಷೇತ್ರದಲ್ಲಿ ಗೆಲುವು. ೩ ಸ್ಥಾನ ಗೆದ್ದರೂ ಕೈ ಹಿಡಿಯದ ಮತದಾರರು
೩) ಬೆಂಗಳೂರು ದಕ್ಷಿಣ-ಸೌಮ್ಯರೆಡ್ಡಿ
————————
೧) ಕ್ಷೇತ್ರದಲ್ಲಿ ಹಿಡಿತ ಇಲ್ಲದೇ ಇರುವ ಅಭ್ಯರ್ಥಿ. ಕೇವಲ ವಿಧಾನಸಭೆ ಚುನಾವಣೆಯ ಸೋಲಿನ ಅನುಕಂಪ ಆಧಾರದ ಮೇಲೆ ಟಿಕೆಟ್ ಪಡೆದು ಗೆಲ್ಲುವ ಭರವಸೆಯಲ್ಲಿದ್ದ ಸೌಮ್ಯರೆಡ್ಡಿ
೨) ತಂದೆಯ ಹೆಸರು ಮತ್ತು ಗ್ಯಾರಂಟಿ ಮೇಲೆ ನಂಬಿಕೆ ಇಟ್ಟು ಚುನಾವಣೆ ಎದುರಿಸಿ ಸೋಲುಕಂಡ ಸೌಮ್ಯರೆಡ್ಡಿ.
೩) ಹಾಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು
೪) ಗ್ಯಾರಂಟಿ ನಂಬಿ ಕೆಟ್ಟ ಅಭ್ಯರ್ಥಿ
೪) ಬೆಳಗಾವಿ-ಮೃಣಾಲ್ ಹೆಬ್ಬಾಳ್ಕರ್
————————-
೧) ರಾಜಕಾರಣದ ಅನುಭವದ ಕೊರತೆ ೩೧ ವರ್ಷದ ಅಭ್ಯರ್ಥಿ. ೬೮ ವರ್ಷ ಸುದೀರ್ಘ ರಾಜಕೀಯ ಅನುಭವದ ಮುಂದೆ ಅಮ್ಮ-ಮಗ ಸೋಲು ಕಾಣಬೇಕಾಯಿತು.
೨) ತಾಯಿ ವರ್ಚಸ್ ಮೇಲೆ ಚುನಾವಣೆ. ರಾಜ್ಯದ ಪ್ರಭಾವಿ ಖಾತೆಯ ಮಂತ್ರಿ ಮಾತು ಕೇಳಿ ಕಾಂಗ್ರೆಸ್ ಕ್ಷೇತ್ರವನ್ನು ಕಳೆದುಕೊಳ್ಳುವಂತಾಯ್ತು.
೩) ಕ್ಷೇತ್ರದ ನಾಯಕರುಗಳ ಅಸಮಾಧಾನ, ಅಹಿಂದ ಮತಗಳಿಗೆ ಮಾತ್ರ ಸೀಮಿತವಾದ ಮತಗಳು
೪) ಶೆಟ್ಟರ್ ಎದುರು ಅಸಮರ್ಥ ಅಭ್ಯರ್ಥಿ
೫) ಬಾಗಲಕೋಟೆ-ಸಂಯುಕ್ತ ಪಾಟೀಲ್
———————-
೧) ತಂದೆಯ ಕೃಪಾಕಟಾಕ್ಷ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಎಂಬ ಕಾರಣಕ್ಕೆ ಟಿಕೆಟ್ ಕೊಟ್ಟು ಕ್ಷೇತ್ರವನ್ನು ಕಳೆದು ಕೊಳ್ಳಬೇಕಾಯಿತು.
೨) ರಾಜಕೀಯ ಅನುಭವದ ಕೊರತೆ
೩) ಪಕ್ಷದ ಮುಖಂಡರುಗಳ ವಿರೋಧ
೪) ಅಹಿಂದ ಮತಗಳಿಗೆ ಸೀಮಿತ
೫) ೭ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ೩, ಬಿಜೆಪಿ ೨ ಸ್ಥಾನ ಗೆಲುವು
೬) ಚಿಕ್ಕಬಳ್ಳಾಪುರ-ರಕ್ಷಾರಾಮಯ್ಯ
———————-
೧) ಪ್ರತಿಷ್ಠೆಯ ಕಣ. ಸುಧಾಕರ್‌ಗೆ ಕುಮಾರಸ್ವಾಮಿಯವರ ಸರ್ಕಾರ ಪತನಕ್ಕೆ ಪ್ರಮುಖಕಾರಣವಾಗಿದ್ದ ಸುಧಾಕರ್. ಕಳೆದ ವಿಧಾನಸಭ ಚುನಾವಣೆಯಲ್ಲಿ ಸೋಲು.
೨) ಹೊರಗಿನ ಅಭ್ಯರ್ಥಿ. ಸುಧಾಕರ್‌ರವರ ಹಗರಣಗಳನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು
೩) ಸಮರ್ಥವಾದ ಅಭ್ಯರ್ಥಿ ಕೊರತೆ
೪) ೫ ವಿಧಾನಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ೩, ಬಿಜೆಪಿ ೧ ಸ್ಥಾನ
೭) ಬೆಂಗಳೂರು ಉತ್ತರ-ರಾಜೀವ್ ಗೌಡ
————————
೧) ಶೋಭ ಕರಂದ್ಲಾಜೆಯ ವಿರುದ್ಧ ಸಮರ್ಥ ನಾಯಕರ ಕೊರತೆಯಿಂದಾಗಿ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತ್ತು
೨) ಗೋ ಬ್ಯಾಕ್ ಶೋಭ ಅವರನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲ
೩) ಒಕ್ಕಲಿಗರ ಮತ ಸೆಳೆಯುವುದರಲ್ಲಿ ವಿಫಲ
೮) ಚಿಕ್ಕಮಗಳೂರು-ಜಯಪ್ರಕಾಶ್ ಹೆಗ್ಗಡೆ
————————-
೧) ಕ್ಷೇತ್ರವು ಸಂಪೂರ್ಣ ಕಟ್ಟಾ ಹಿಂದುತ್ವದ ಕ್ಷೇತ್ರ
೨) ಅಲ್ಲಿ ಸಮರ್ಥ ಅಭ್ಯರ್ಥಿಯ ಅವ್ಯಕತೆ ಇತ್ತು
೩) ಗ್ಯಾರಂಟಿ ಮೇಲೆ ಚುನಾವಣೆ
ಶಿವಮ್ಗೊಗ-ಗೀತಾ ಶಿವರಾಜ್‌ಕುಮಾರ್
————————
೧) ಮತ್ತೆ ಶಿವಮೊಗ್ಗ ಕ್ಷೇತ್ರದಲ್ಲಿ ಬಂಗಾರಪ್ಪ ಹೆಸರು ಪ್ರಯೋಗ. ಸತತ ಸೋಲು ಮತ್ತು ಅನುಕಂಪ ವರ್ಕ್ಔಟ್ ಆಗಲ್ಲ ಎನ್ನುವುದಕ್ಕೆ ಸಾಕ್ಷಿ ಗೀತಾ ಶಿವರಾಜ್‌ಕುಮಾರ್
೨) ತಮ್ಮನ ಹೆಗಲಿಗೆ ಜವಾಬ್ದಾರಿ. ಸ್ಥಳೀಯವಾಗಿ ವಾಸವಿಲ್ಲ ಎನ್ನು ದೊಡ್ಡ ಆರೋಪದಿಂದಾಗಿ ಸೋಲುಕಾಣಬೇಕಾಯಿತು.
೩) ಬೇರೆಯವರಿಗೆ ಅವಕಾಶ ನೀಡಿದ್ದಾರೆ ಪ್ರಬಲ ಪೈಪೋಟಿ
೪) ಈಶ್ವರಪ್ಪ ಅಂತಹ ನಾಯಕರನ್ನು ಬಳಸಿಕೊಳಬೇಕಾಗಿತ್ತು
ಹಗಲು ಕಂಡ ಭಾವಿಯಲ್ಲಿ ರಾತ್ರಿ ಬಿದ್ದಂಗಾಗಿದೆ ಕಾಂಗ್ರೆಸ್ ಸ್ಥಿತಿ
ಸುಲಭವಾಗಿ ಗೆಲ್ಲುವ ಕ್ಷೇತ್ರಗಳನ್ನು ಸ್ವಪ್ರತಿಷ್ಠೆ ಬಣ್ಣದ ಗುದ್ದಾಟದಿಂದಾಗಿ ಕಾಂಗ್ರೆಸ್‌ನ ತುತ್ತು ಬಿಜೆಪಿ ಪಾಲಾಗಿದೆ