Tuesday, January 27, 2026
26.7 C
Bengaluru
Google search engine
LIVE
ಮನೆ#Exclusive NewsTop Newsಸತ್ಯವಾಯ್ತು ಫ್ರೀಡಂ ಟಿವಿ ವರದಿ: ಪ್ರತಾಪ್ ಸಿಂಹಗೆ ಹೊಗೆ ಬಾಂಬ್: ಗುನ್ನ ಕೊಟ್ಟಿದ್ದು ವಿಜಯೇಂದ್ರ ?

ಸತ್ಯವಾಯ್ತು ಫ್ರೀಡಂ ಟಿವಿ ವರದಿ: ಪ್ರತಾಪ್ ಸಿಂಹಗೆ ಹೊಗೆ ಬಾಂಬ್: ಗುನ್ನ ಕೊಟ್ಟಿದ್ದು ವಿಜಯೇಂದ್ರ ?

ಫ್ರೀಡಂ ಟಿವಿ ವರದಿ ಸತ್ಯವಾಗಿದೆ. ಮಾಧ್ಯಮದಲ್ಲೆ ಮೊದಲು ಎಂಬಂತೆ ಪ್ರತಾಪ್ ಸಿಂಹಗೆ ಹೊಗೆ ಬಾಂಬ್ ಎಂಬ ಶೀರ್ಷಿಕೆಯಡಿಯಲ್ಲಿ ಟಿಕೆಟ್ ಸಿಗೋದಿಲ್ಲ ಎಂಬ ಮುನ್ಸುಚನೆಯನ್ನ ಫ್ರೀಡಂ ಟಿವಿ ಕೊಟ್ಟಿತ್ತು.. ಇದೀಗ ವರದಿ ಸತ್ಯವಾಗಿದೆ.. ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಿದೆ. ಪರಸ್ಪರ ಒಳ ಏಟು ರಾಜಕೀಯಕ್ಕೆ ಸಿಂಹ ಬಲಿಪಶುವಾದ್ರಾ ಎಂಬ ಪ್ರಶ್ನೆಯೂ ಸೃಷ್ಟಿಯಾಗುತ್ತೆ. ಅಂದಾಗೆ ಪ್ರತಾಪ್ ಸಿಂಹಗೆ ಟಿಕೆಟ್ ಸಿಗದಂತೆ ನೋಡಿಕೊಂಡಿರೋದು, ವಿಜಯೇಂದ್ರ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.


ಕಳೆದ ಅಸೆಂಬ್ಲಿ ಚುನಾವಣೆ ವೇಳೆ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡೋದಿಕ್ಕೆ ವಿಜಯೇಂದ್ರ ಪ್ರಯತ್ನಿಸಿದ್ರು.. ಆ ವೇಳೆ ರಣತಂತ್ರ ಹೆಣೆದಿದ್ದ ಪ್ರತಾಪ್ ಸಿಂಹ ಮತ್ತು ರಾಮ್ ದಾಸ್, ರಾಜಕೀಯ ದಾಳ ಉರುಳಿಸಿ ವಿಜಯೇಂದ್ರಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ರು. ಅವತ್ತು ವರಿಷ್ಟರ ಕಿವಿ ಕಚ್ಚಿ ವಿಜಯೇಂದ್ರ ಮೈಸೂರು ರಾಜಕಾರಣಕ್ಕೆ ಎಂಟ್ರಿ ಕೊಡದಂತೆ ನೋಡಿಕೊಂಡಿದ್ರು. ಇದೀಗ ಆ ಸೇಡನ್ನ ವಿಜಯೇಂದ್ರ ಪ್ರತಾಪ್ ಸಿಂಹಗೆ ಟಿಕೆಟ್ ಸಿಗದಂತೆ ನೋಡಿಕೊಂಡು ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರುತ್ತಲೇ ತನಗಾದವರನ್ನ ಅಣಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ವು.. ಅದರ ಮುಂದುವರಿದ ಭಾಗ ಎಂಬಂತೆ ಇದೀಗ ಲೋಕಾ ಟಿಕೆಟ್ ನಲ್ಲೂ ವಿಜಯೇಂದ್ರ ಬಣ ಬಲ ಪ್ರದರ್ಶನ ಮಾಡಿ, ಸಂತೋಷ್ ಜೀ ಬಣಕ್ಕೆ ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ವಿಜಯೇಂದ್ರ ಮೈಸೂರು ಒಡೆಯರ್ ಯದುವೀರ್ ಕರೆತಂದು, ಸಿಂಹವನ್ನ ಕಟ್ಟಿಹಾಕಿ, ಮೈಸೂರಿನ ಮೇಲೆ ಹಿಡಿತದ ಜೊತೆಗೆ ರಾಜಕೀಯ ಭವಿಷ್ಯವನ್ನೂ ಸಲೀಸು ಮಾಡಿಕೊಳ್ಳಲು ವಿಜಯೇಂದ್ರ ಕಸರತ್ತು ನಡೆಸುತ್ತಿದ್ದಾರೆ. ಒಂದು ಹಂತದಲ್ಲಿ ಯಶಸ್ವಿಯೂ ಆಗಿದ್ದಾರೆ.

ಇನ್ನು ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ತಪ್ಪುವಲ್ಲಿಯೂ ವಿಜಯೇಂದರ ಬಣ ಯಶಸ್ವಿಯಾಗಿದೆ. ಈ ಮೂಲಕ ಸಂತೋಷ್ ಜಿ ಬಣಕ್ಕೆ ಭರ್ಜರಿ ಶಾಕ್ ಕೊಟ್ಟಿದೆ ವಿಜಯೇಂದ್ರ ಟೀಮ್. ಕಳೆದ ಅಸೆಂಬ್ಲಿ ಚುನಾವಣೆಯಲ್ಲೂ ವಿಜಯೇಂದ್ರ ಬಣದ ವಿರುದ್ದ ಸಂತೋಷ್ ಜೀ ಟೀಮ್ ಷಡ್ಯಂತ್ರ ಮಾಡಿದೆ ಎಂಬ ಆರೋಪವೂ ಇದೆ. ಒಟ್ನಲ್ಲಿ ಸಿಂಹಗೆ ಟಿಕೆಟ್ ಸಿಗೋದಿಲ್ಲ ಅಂತ ಮುನ್ಸೂಚನೆ ಕೊಟ್ಟಿದ್ದ ಫ್ರೀಡಂ ಟಿವಿ ವರದಿ ಸತ್ಯವಾಗಿದೆ. ವಿಜಯೇಂದ್ರ ಬಣದ ರಾಜಕೀಯ ರಣವ್ಯೂಹದ ಬಗ್ಗೆಯೂ ಫ್ರೀಡಂ ಟಿವಿ ಖಚಿತ ವರದಿ ಪ್ರಸಾರ ಮಾಡಿತ್ತು..ಅದು ಕೂಡ ಸತ್ಯವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments