ನಕಲಿ ಡಾಲ್ಡಾ, ಗ್ರೀಸ್, ಶುಗರ್, ವೈಟ್ನರ್, ಸೋಪು ಸೇರಿದಂತೆ ಮತ್ತಿತ್ತರೆ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಾಗೋದು ದನದ ಮೂಳೆಗಳು..ಭಾರತ ಒಂದರಿಂದಲೇ ಸುಮಾರು 21 ಲಕ್ಷ ಟನ್ ದನದ ಮೂಳೆ ಎಕ್ಸಪೋರ್ಟ್ ಆಗುತ್ತೆ. ದೈವ ಸ್ವರೂಪಿ ಗೋಮಾತೆಯನ್ನ ಕತ್ತರಿಸಿದೇ ಈ ಮೂಳೆಗಳು ಸಿಗೋದಾದ್ರೂ ಹೇಗೆ..? ಎಲ್ಲವೂ ಅಕ್ರಮವೇ.. ಹಣದಾಸೆಗಾಗಿ ಹಿಂದೂಗಳು ದೇವರು ಅಂತ ಪೂಜಿಸೋ ಗೋವನ್ನ ಕೇವಲ ಮಾಂಸಕ್ಕಾಗಿ ಮಾತ್ರವಲ್ಲ, ಅದರ ಮೂಳೆಗಳಿಗಾಗಿಯೇ ಕತ್ತರಿಸಲಾಗುತ್ತಿದೆ.
ಕೇಳೋರು ಯಾರು..? ಕೇಳಬೇಕಾದವರು ಸೈಲೆಂಟಾಗಿ ಕಮೀಷನ್ ಪಡ್ಕೊಂಡು ಸೈಡಲಿದ್ದಾರೆ. ಇದೊಂದು ದೊಡ್ಡ ಮಟ್ಟದ ವ್ಯವಹಾರ. ಅದ್ರಲ್ಲೂ ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡಿನಲ್ಲಿ ಗೋ ಮೂಳೆಗಳನ್ನ ಪುಡಿ ಮಾಡಿ ಎಕ್ಸ್ ಪೋರ್ಟ್ ಮಾಡೋ ದೊಡ್ಡ ದೊಡ್ಡ ಕಾರ್ಖನೆಗಳೇ ಇವೆ. ಈ ಕಾರ್ಖನೆಗಳಿಗೆ ಮೂಳೆ ಸಪ್ಲೈ ಮಾಡೋಕೆ ಅಂತಲೇ ಏಜೆಂಟರ್ಗಳು ರಾಜ್ಯದಲ್ಲಿ ಆಕ್ಟೀವ್ ಆಗಿಯೇ ಇದ್ದಾರೆ.

ಇನ್ನು ದನದ ಮೂಳೆಗಳನ್ನ ಪರಿಷ್ಕರಿಸುವಂತಹ ಸಣ್ಣ ಸಣ್ಣ ಕಾರ್ಖನೆಗಳು ಮಂಡ್ಯ, ಚಾಮರಾಜನಗರ, ಕಿರುಗಾವಲು ಸೇರಿದಂತೆ ಹಲವಡೆ ತಲೆ ಎತ್ತಿವೆ. ಇಷ್ಟಕ್ಕೂ ಈ ಕಾರ್ಖನೆಗಳಿಗೆ ಲೈಸೆನ್ಸ್ ಕೊಟ್ಟಿರೋರು ಯಾರು..? ಗ್ರಾಮೀಣ ಭಾಗಕ್ಕೆ ಪಿಡಿಓಗಳೇ ದೊಡ್ಡ ಅಧಿಕಾರಿಗಳು. ಇಂತಹ ಪಿಡಿಓಗಳಿಗೆ ಹಣದಾಸೆ ತೋರಿಸಿ ಈ ಮೂಳೆ ಸಂಸ್ಕರಣೆ ಘಟಕಗಳನ್ನ ಆರಂಭಿಸಿದ್ದಾರೆ. ಪಿಡಿಓಗಳಿಗೆ ಕಾಸು ಕೊಟ್ರೆ ಸಾಕು..ಲೈಸೆನ್ಸು ಬೇಡ.. ಪಂಚಾಯ್ತಿ ಪರ್ಮಿಷನ್ನು ಬೇಡ..

ಇದೀಗ ಮತ್ತೊಂದು ಸುತ್ತಿಗೆ ಪಿಡಿಓಗಳ ಅಕ್ರಮ ಬಯಲಾಗಿದೆ. ಗ್ರಾಮ ಸ್ವರಾಜ್ ಎಂದರೆ ಆರೋಗ್ಯಯುಕ್ತ ಗ್ರಾಮಗಳ ನಿರ್ಮಾಣ.. ಉತ್ತಮ ವಾತವರಣ ನಿರ್ಮಾಣ ಮಾಡುವ ಜವಾಬ್ದಾರಿ ಪಿಡಿಓಗಳದ್ದು. ಆದ್ರೆ ಮಂಡ್ಯ ಜಿಲ್ಲೆಯಲ್ಲಿ ಆಗುತ್ತಿರೋದೇ ಬೇರೆ. ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆ ಮೂಲ ಉದ್ದೇಶವನ್ನೇ ಬುಡುಮೇಲು ಮಾಡಲಾಗ್ತಿದೆ. ಹಣದಾಸೆಗಾಗಿ ಜಿಲ್ಲೆಯಲ್ಲಿ ಪರಿಸರನಾಶವಾಗ್ತಿದ್ರು..ಪಿಡಿಓಗಳು ಕ್ಯಾರೆ ಎನ್ನುತ್ತಿಲ್ಲ.. ಗ್ರಾಮೀಣ ಅಭಿವೃದ್ದಿ ಅನ್ನೋದು ಮರೀಚಿಕೆ.

ಮೂಳೆ ಉದ್ಯಮಿಗಳ ಜೊತೆ ಕೈ ಜೋಡಿಸಿ ಕಾಸು ಮಾಡುತ್ತಾ ಹಾಯಾಗಿದ್ದಾರೆ ಪಿಡಿಓಗಳು. ಪರಿಸರವನ್ನ ನಾಶ ಮಾಡುತ್ತಿರುವ ಈ ಖದೀಮ ದಂಧೆ ಇದೀಗ ವ್ಯಾಪಕವಾಗಿ ಹರಡಿದೆ,. ಇದಕ್ಕೆ ನೇರ ಕಾರಣ ಅನುಮತಿ ಇಲ್ಲದೆ ಅಡಕಸುಬಿ ಕೆಲಸಗಳನ್ನ ಮಾಡೋಕೆ ಓಕೆ ಅಂತ ಸೈಲೆಂಟಾಗಿವೆ ಗ್ರಾಮಪಂಚಾಯ್ತಿಗಳು. ಈ ರೀತಿ ಗ್ರಾಮೀಣ ಭಾಗದಲ್ಲಿ ಯಾವುದೇ ವ್ಯವಹಾರ ಆರಂಭಿಸಬೇಕಾದ್ರೂ ಪಂಚಾಯ್ತಿ ಅನುಮತಿ ಕಡ್ಡಾಯ, ಜೊತೆಗೆ ಲೈಸೆನ್ಸ್ ಕೂಡ ಅಷ್ಟೆ ಮುಖ್ಯ. ಆದ್ರೆ ಮಂಡ್ಯ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೂಳೆ ಉದ್ಯಮ ನಾಯಿ ಕೊಡೆಗಳಂತೆ ಎದ್ದಿವೆ. ಮೂಳೆ ಉದ್ಯಮಿಗಳು ನೇರವಾಗಿ ವ್ಯವಹರಿಸಿದೇ ಪಿಡಿಓಗಳಿಗೆ ಅನಧಿಕೃತವಾಗಿ ಹಣ ನೀಡಿ ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ. ಅವರಿಂದ ಕಾಸು ಪಡೆದು ಕಳ್ಳ ಖದೀಮರ ರಕ್ಷಣೆಗೆ ಪಿಡಿಓಗಳು ನಿಂತು ಬಿಟ್ಟಿದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನಿಷೇಧಿತ ಉದ್ಯಮ ರಾಜಾರೋಷವಾಗಿಯೇ ನಡೆಯುತ್ತಿದೆ.

ಜಿಲ್ಲೆಯ ತೂಬಿನಕೆರೆ ಮತ್ತು ಕಿರುಗಾವಲು ವ್ಯಾಪ್ತಿಯಲ್ಲಿ ದನದ ಮೂಳೆ ಉದ್ಯಮ ದೊಡ್ಡ ಪ್ರಮಾಣದಲ್ಲಿಯೇ ನಡೆಯುತ್ತಿದೆ. ಗ್ರಾಮದ ಹೊರ ಭಾಗದಲ್ಲಿ ಮೂಳೆ ಸಂಗ್ರಹ ಮಾಡಿ, ಕೊಳೆಸಿ ನಂತರ ಹಲವು ಉದ್ಯಮಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರಿಂದ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ನಕಲಿ ಡಾಲ್ಡಾ, ಶುಗರ್, ವೈಟ್ನರ್, ಹಾಗೂ ಜಿಲೆಟಿನ್ ಯುಕ್ತ ಔಷಧಿಗಳು ಸೇರಿದಂತೆ ಇತರೆ ಉದ್ಯಮಗಳಲ್ಲಿ ಮೂಳೆಯನ್ನು ಬಳಕೆ ಮಾಡಲಾಗುತ್ತದೆ. ಮೂಳೆಯನ್ನು ಸಂಗ್ರಹ ಮಾಡುತ್ತಿರವುದರಿಂದ ಸುತ್ತಮುತ್ತಲ ಪರಿಸರದಲ್ಲಿ ಗಬ್ಬು ವಾಸನೆ ಹರಡಿ, ವಾತಾವರಣ ಕಲುಷಿತಗೊಳ್ಳುತ್ತಿದೆ. ಬೀದಿ ನಾಯಿಗಳು ಮೂಳೆ ರುಚಿ ನೋಡಿ ಮಾನವರ ಮೇಲೆ ದಾಳಿ ಮಾಡುತ್ತಿವೆ
ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಮತ್ತು ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ಮಂಡ್ಯ ಸಮೀಪದ ತೂಬಿನಕೆರೆ ಬಳಿ ಮೂಳೆ ಉದ್ಯಮಗಳು ಮೂಳೆ ಸಂಗ್ರಹದಲ್ಲಿ ತೊಡಗಿಕೊಂಡಿದ್ದಾರೆ. ಪರಿಸರಕ್ಕೆ ಹಾನಿಕರವಾದ ಮೂಳೆ ಉದ್ಯಮದ ಮೇಲೆ ನಿಯಂತ್ರಣ ಏರಬೇಕಾದ ಗ್ರಾಮ ಪಂಚಾಯಿತಿ ಅಭಿವೃವೃದ್ಧಿ ಅಧಿಕಾರಿಗಳು ತಮಗೂ, ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಜಾಣ ಕುರುಡುತನದಿಂದ ಸ್ಥಳೀಯ ನಿವಾಸಿಗಳ ತೊಂದರೆ ಅನುಭವಿಸಬೇಕಾಗಿದೆ. ಪ್ರತಿನಿತ್ಯ ಮೂಗು ಮುರಿದುಕೊಂಡು ಓಡಾಟ ಮಾಡಬೇಕಾಗಿದೆ, ವ್ಯವಸಾಯ ಮಾಡೋಕು ರೈತರು ಸಂಕಷ್ಟ ಪಡುತ್ತಿದ್ದಾರೆ.

ಮೂಳೆ ಉದ್ಯಮ ಕೋಟ್ಯಂತರ ರೂಪಾಯಿ ವ್ಯವಹಾರ ಹೊಂದಿದೆ. ಲೈಸೆನ್ಸ್ ಇಲ್ಲದೇ ಉದ್ಯಮ ನಡೆಸಲಾಗುತ್ತಿದೆ. ಮೂಳೆ ಸಂಗ್ರಹ ಮಾಡಲಾಗುತ್ತಿದೆ. ದಾಳಿ ಮಾಡುವ ಅಧಿಕಾರಿಗಳನ್ನು ನಿಯಂತ್ರಣ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉದ್ಯಮ ನಿಯಂತ್ರಣ ಮಾಡದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಗೋ ಹತ್ಯೆ ನಿಷೇದವಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೂಳೆ ಬರುವುದಾದರೂ ಹೇಗೆ ಎಂಬ ಪ್ರಶ್ನೆ ಗೋ ಪ್ರೇಮಿಗಳಲ್ಲಿ ಮೂಡಿದೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ದನದ ಮೂಳೆ ಉದ್ಯಮ ನಿಯಂತ್ರಣದ ಜೊತೆಗೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಇಂತಹ ಚಟುವಟಿಕೆಯನ್ನು ಬಂದ್ ಮಾಡಬೇಕಾಗಿದೆ.

By admin

Leave a Reply

Your email address will not be published. Required fields are marked *

Verified by MonsterInsights