Friday, September 12, 2025
25 C
Bengaluru
Google search engine
LIVE
ಮನೆರಾಜಕೀಯರೆಬೆಲ್​​ ಶಾಸಕರಿಗೆ ಮಣೆ ಹಾಕಿದ ಕಾಂಗ್ರೆಸ್…!​

ರೆಬೆಲ್​​ ಶಾಸಕರಿಗೆ ಮಣೆ ಹಾಕಿದ ಕಾಂಗ್ರೆಸ್…!​

ಬೆಂಗಳೂರು – ಸರ್ಕಾರದ ರಚನೆಯಾದ ಆರಂಭದಿಂದಲೂ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಇಬ್ಬರು ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ಮಾಡಲಾಗಿದೆ. ಸಚಿವ ಸ್ಥಾನ ಸಿಗಲಿಲ್ಲ ಅನ್ನೋ ಕಾರಣಕ್ಕೆ ಪಕ್ಷದ ವಿರುದ್ಧ ಆಸಮಾಧಾನ ಹೊರಹಾಕಿದ್ದ ಇಬ್ಬರು ಶಾಸಕರು ಸರ್ಕಾರದ ಪತ್ರದ ಸಮರ ಸಾರಿದ್ದರು. ಸರ್ಕಾರಕ್ಕೆ ಒಂದು ರೀತಿ ಮುಜುಗರಕ್ಕೊಳಪಟ್ಟಿತ್ತು.

ಇಬ್ಬರು ಶಾಸಕರು ಕೂಡ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ತಮ್ಮ ತಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ, ಸಂಬಂಧಿಸಿದ ಸಚಿವರು ಸ್ಪಂದಿಸುತ್ತಿಲ್ಲ, ಎಂದು ಪತ್ರದ ಮೂಲಕ ಆಕ್ರೋಶ ಹೊರಹಾಕಿದ್ರು. ನನಗಿಂತ ಕಿರಿಯ ವಯಸ್ಸಿನ ಶಾಸಕರಿಗೆ ಸಚಿವ ಸ್ಥಾನದ ಮಣೆ ಹಾಕಿದ್ದಾರೆ ಎಂದು ಆಗಾಗ್ಗೆ ಅಸಮಾಧಾನ ಹೊರಹಾಕುತ್ತಾ ಬಂದಿದ್ದರು. ಬಸವರಾಜ ರಾಯರೆಡ್ಡಿ ಹಾಗೂ ಬಿ.ಆರ್​​. ಪಾಟೀಲ್​​ಗೆ ಸಂಪುಟ ಸ್ಥಾನಮಾನ ದರ್ಜೆ ನೀಡಿ ಈ ಇಬ್ಬರ ಮುನಿಸನ್ನ ತಣ್ಣಗೆ ಮಾಡೋ ಕೆಲಸವನ್ನು ಸದ್ಯ ಕಾಂಗ್ರೆಸ್​​ ಸರ್ಕಾರ ಮಾಡಿದೆ ಎನ್ನಲಾಗ್ತಿದೆ.

ಬಸವರಾಜ ರಾಯರೆಡ್ಡಿ ಫ್ರೀಡಂ ಟಿವಿಗೆ ಪ್ರತಿಕ್ರಿಯೆ..!

ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ನೇಮಕವಾದ ಬಳಿಕ ಫ್ರೀಡಂ ಟಿವಿಗೆ ಪ್ರತಿಕ್ರಿಯಿಸಿದ ಶಾಸಕ ಬಸವರಾಜ ರಾಯರಡ್ಡಿ. ನನ್ನ ನೇಮಕ ಮಾಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​​ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ಅಭಿನಂದನೆ ತಿಳಿಸಿದ್ರು, ಇದೊಂದು ದೊಡ್ಡ ಜವಬ್ದಾರಿ ಹುದ್ದೆ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ಮತ್ತು ರಾಜ್ಯ ಅಭಿವೃದ್ಧಿಗೆ ಸಲಹೆಗಳನ್ನ ನೀಡುತ್ತೇನೆ ಎಂದು ಹೇಳಿದರು. ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ರಿ ಅನ್ನೋ ಪ್ರಶ್ಬೆಗೆ ನಾನು ಯಾವಾಗಲೂ ನನ್ನ ಕ್ಷೇತ್ರದ ಕೆಲಸ ಮಾಡಿಕೊಂಡು ಹೋಗುತ್ತೇನೆ, ದೊಡ್ಡ ಜವಬ್ದಾರಿ ಕೊಟ್ಟಿದ್ದಾರೆ ನಿಭಾಯಿಸಿಕೊಂಡು ಹೋಗುತ್ತೇನೆ ಎಂದಷ್ಟೇ ತಿಳಿಸಿದರು.

ಇನ್ನೂ ಈ ಇಬ್ಬರ ಶಾಸಕರ ಜೊತೆ ಹಿರಿಯ ಶಾಸಕ ಆರ್​​ ವಿ ದೇಶಪಾಂಡೆರವರಿಗೆ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ನೀಡಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments