
ನವದೆಹಲಿ: ಗ್ಯಾಸ್ ಕೊರತೆ ಮತ್ತು ಇಂಧನ ಸಮಸ್ಯೆ ಬಗ್ಗೆ ದೇಶದ ಜನರು ಪ್ಯಾನಿಕ್ ಆಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.
ಸಂಸತ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಜನರಿಗೆ ಗಾಬರಿ ಬೇಡ ಎಂದು ಹೇಳುತ್ತಿದ್ದರೂ, ಅವರು ತಾವೇ ಹಲವು ವಿಷಯಗಳಿಂದ ಒತ್ತಡದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಅದಾನಿ ಸಂಬಂಧಿತ ಪ್ರಕರಣಗಳು ಹಾಗೂ ಎಪ್ಸ್ಟಿನ್ ಫೈಲ್ಗಳ ವಿಚಾರದಿಂದಲೇ ಪ್ರಧಾನಿ ಮೋದಿ ಆತಂಕದಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಇದೇ ಕಾರಣದಿಂದ ಅವರು ಸಂಸತ್ ಕಲಾಪಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು .
“ದೇಶದ ಜನರಿಗೆ ಪ್ಯಾನಿಕ್ ಆಗಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅವರೇ ಪ್ಯಾನಿಕ್ ಆಗಿದ್ದಾರೆ,” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು .
ಈ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಮತ್ತೊಮ್ಮೆ ವಾಗ್ವಾದ ತೀವ್ರವಾಗುವ ಸಾಧ್ಯತೆ ಕಂಡುಬರುತ್ತಿದೆ.




